ಹುಬ್ಬಳ್ಳಿ:ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ದಕ್ಷಿಣ ರೈಲ್ವೆಯು ಜುಲೈ 29ರಂದು ಮಂಗಳೂರು ಸೆಂಟ್ರಲ್ನಿಂದ ಹುಬ್ಬಳ್ಳಿಗೆ ಏಕಮುಖ ವಿಶೇಷ ರೈಲನ್ನು ಓಡಿಸಲಿದೆ.
ರೈಲು ಸಂಖ್ಯೆ 06178 ಮಂಗಳೂರು ಸೆಂಟ್ರಲ್ - ಎಸ್ಎಸ್ಎಸ್ ಹುಬ್ಬಳ್ಳಿ ಒನ್ ವೇ ಸ್ಪೆಷಲ್ ರೈಲು ಜುಲೈ 29ರಂದು ರಾತ್ರಿ 11:10 ಗಂಟೆಗೆ ಮಂಗಳೂರು ಸೆಂಟ್ರಲ್ನಿಂದ ಹೊರಟು, ಮರುದಿನ ಮಧ್ಯಾಹ್ನ 2:30ರ ವೇಳೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಈ ವಿಶೇಷ ರೈಲು ಮಾರ್ಗದಲ್ಲಿ ಮಂಗಳೂರು ಜಂಕ್ಷನ್ (11:40/11:45pm), ಮೂಲ್ಕಿ (12:50/12:52am), ಉಡುಪಿ (01:45/01:47am), ಬಾರ್ಕೂರು (02:05/02:07am), ಕುಂದಾಪುರ (02:25/02:27am), ಬೈಂದೂರು ಮೂಕಾಂಬಿಕಾ ರೋಡ್ (03:05/03:07am), ಭಟ್ಕಳ (03:23/03:25am), ಮುರ್ಡೇಶ್ವರ (03:45/03:47am), ಹೊನ್ನಾವರ (04:13/04:15am), ಕುಮಟಾ (04:28/04:30am), ಗೋಕರ್ಣ ರೋಡ್ (04:45/04:47am), ಕಾರವಾರ (05:35/05:40am), ಬಲ್ಲಿ (06:10/ 06:12am), ಮಡಗಾಂವ್ (07:30/07:45am), ಸ್ಯಾನ್ವೊರ್ಡೆಮ್ (08:23/08:25am), ಕುಲೆಮ್ (09:00/09:10am), ಕ್ಯಾಸಲ್ ರಾಕ್ (10:20/10:25am), ಲೋಂಡಾ (10:58/11:00am), ಅಳ್ನಾವರ (11:48/11:50am) ಮತ್ತು ಧಾರವಾಡ (12:38/12:40pm) ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಈ ರೈಲು ಎಸಿ 3 ಟೈರ್ 1, ಸ್ಲೀಪರ್ ಕ್ಲಾಸ್ 6, ಜನರಲ್ ಸೆಕೆಂಡ್ ಕ್ಲಾಸ್ 5 ಮತ್ತು ಎಸ್ಎಲ್ಆರ್ ಡಿ 2 ಸೇರಿದಂತೆ 14 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಪ್ರಯಾಣಿಕರೇ ಗಮನಿಸಿ: ಭೂಕುಸಿತ ಹಿನ್ನೆಲೆ ಮೈಸೂರು ವಿಭಾಗದ ಹಲವು ರೈಲು ರದ್ದು - Trains Cancel Due To Landslide