ಕರ್ನಾಟಕ

karnataka

ETV Bharat / state

ಪ್ರಯಾಣಿಕರೇ ಗಮನಿಸಿ: ಕೆಲ ರೈಲುಗಳ ನಿಲುಗಡೆ ಹಾಗೂ ಹತ್ತು ವಿಶೇಷ ರೈಲುಗಳ ಸಂಚಾರ ಮುಂದುವರಿಕೆ - Special trains - SPECIAL TRAINS

ನೈರುತ್ಯ ರೈಲ್ವೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲ ರೈಲುಗಳ ತಾತ್ಕಾಲಿಕ ನಿಲುಗಡೆ ಮತ್ತು ವಿಶೇಷ ರೈಲುಗಳ ಸಂಚಾರವನ್ನು ಮುಂದುವರಿಸಲಾಗಿದೆ.

SOUTH WESTERN RAILWAY
SOUTH WESTERN RAILWAY

By ETV Bharat Karnataka Team

Published : Apr 16, 2024, 8:05 AM IST

ಹುಬ್ಬಳ್ಳಿ:ನೈರುತ್ಯ ರೈಲ್ವೆಯಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಕೆಲ ರೈಲುಗಳ ನಿಲುಗಡೆ ಹಾಗೂ ಹತ್ತು ವಿಶೇಷ ರೈಲುಗಳ ಸಂಚಾರ ಮುಂದುವರಿಕೆ ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖ ರೈಲುಗಳ ವಿವರ ಈ ಕೆಳಗಿನಂತಿದೆ.

ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು - ಮಾರಿಕುಪ್ಪಂ ನಿಲ್ದಾಣಗಳ ನಡುವೆ ಸಂಚರಿಸುವ ಮೆಮು ಸ್ಪೆಷಲ್ (ರೈಲು ಸಂಖ್ಯೆ 01771/01772) & ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು ನಡುವೆ ನಿತ್ಯ ಸಂಚರಿಸುವ ಮೆಮು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16521) ರೈಲುಗಳಿಗೆ ದೇವನಗೊಂದಿ ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಏಪ್ರಿಲ್ 16 ರಿಂದ ಜುಲೈ 16, 2024 ರವರೆಗೆ ಅಂದರೆ ಇನ್ನೂ ಮೂರು ತಿಂಗಳ ಕಾಲ ಮುಂದುವರಿಯಲಿದೆ.

ವಿಜಯಪುರ - ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಪ್ರತಿನಿತ್ಯ ಸಂಚರಿಸುವ (ರೈಲು ಸಂಖ್ಯೆ 07377/07378) ಎಕ್ಸ್​ಪ್ರೆಸ್ ರೈಲುಗಳಿಗೆ ಬೀರೂರು ನಿಲ್ದಾಣದಲ್ಲಿ ಎರಡು ನಿಮಿಷ ತಾತ್ಕಾಲಿಕ ನಿಲುಗಡೆ ಏಪ್ರಿಲ್ 17 ರಿಂದ ಅಕ್ಟೋಬರ್ 16, 2024 ರವರೆಗೆ ಅಂದರೆ ಆರು ತಿಂಗಳ ಕಾಲ ಮುಂದುವರಿಸಲಾಗುತ್ತಿದೆ.

ಯಶವಂತಪುರ - ಸಿಂಧನೂರು ನಿಲ್ದಾಣಗಳ ನಡುವೆ ಪ್ರತಿನಿತ್ಯ ಸಂಚರಿಸುವ (ರೈ.ಸಂಖ್ಯೆ 16545/16546) ಎಕ್ಸ್​ಪ್ರೆಸ್ ರೈಲುಗಳಿಗೆ ರಾಮಗಿರಿ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ಏಪ್ರಿಲ್ 17 ರಿಂದ ಅಕ್ಟೋಬರ್ 16, 2024 ರವರೆಗೆ ಅಂದರೆ ಆರು ತಿಂಗಳ ಕಾಲ ಮುಂದುವರಿಸಲಾಗುತ್ತಿದೆ.

ಹತ್ತು ವಿಶೇಷ ರೈಲುಗಳ ಸಂಚಾರ ಮುಂದುವರಿಕೆ:ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ದಾನಾಪುರ ನಿಲ್ದಾಣಗಳ ನಡುವೆ ಚಲಿಸುವ ಹತ್ತು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಸೇವೆಯನ್ನು ಅಸ್ತಿತ್ವದಲ್ಲಿರುವ ಮಾರ್ಗ, ನಿಲುಗಡೆ ಮತ್ತು ಸಮಯದೊಂದಿಗೆ ಜುಲೈ-2024 ರವರೆಗೆ ಮುಂದುವರಿಸಲು ಪೂರ್ವ ಮಧ್ಯ ರೈಲ್ವೆ ವಲಯವು ಸೂಚಿಸಿದೆ. ವಿವರ ಈ ಕೆಳಗಿನಂತಿವೆ:

1. ರೈಲು ಸಂಖ್ಯೆ 03245, ದಾನಾಪುರ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ 31.07.2024 ರವರೆಗೆ ಸಂಚರಿಸಲಿದೆ (14 ಟ್ರಿಪ್).

2. ರೈಲು ಸಂಖ್ಯೆ 03246 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ದಾನಾಪುರ, ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ 02.08.2024 ರವರೆಗೆ ಸಂಚರಿಸಲಿದೆ (14 ಟ್ರಿಪ್).

3. ರೈಲು ಸಂಖ್ಯೆ 03251 ದಾನಾಪುರ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ 29.07.2024 ರವರೆಗೆ ಸಂಚರಿಸಲಿದೆ (26 ಟ್ರಿಪ್).

4. ರೈಲು ಸಂಖ್ಯೆ 03252 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ದಾನಾಪುರ, ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ 31.07.2024 ರವರೆಗೆ ಸಂಚರಿಸಲಿದೆ (26 ಟ್ರಿಪ್).

5. ರೈಲು ಸಂಖ್ಯೆ 03259 ದಾನಾಪುರ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ 30.07.2024 ರವರೆಗೆ ಸಂಚರಿಸಲಿದೆ (13 ಟ್ರಿಪ್).

6. ರೈಲು ಸಂಖ್ಯೆ 03260 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ದಾನಾಪುರ, ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ 01.07.2024 ರವರೆಗೆ ಸಂಚರಿಸಲಿದೆ (13 ಟ್ರಿಪ್).

7. ರೈಲು ಸಂಖ್ಯೆ 03247 ದಾನಾಪುರ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ 25.07.2024 ರವರೆಗೆ ಸಂಚರಿಸಲಿದೆ (13 ಟ್ರಿಪ್).

8. ರೈಲು ಸಂಖ್ಯೆ 03248 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ದಾನಾಪುರ, ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ 27.07.2024 ರವರೆಗೆ ಸಂಚರಿಸಲಿದೆ (13 ಟ್ರಿಪ್).
9. ರೈಲು ಸಂಖ್ಯೆ 03241 ದಾನಾಪುರ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ 26.07.2024 ರವರೆಗೆ ಸಂಚರಿಸಲಿದೆ (13 ಟ್ರಿಪ್).
10. ರೈಲು ಸಂಖ್ಯೆ 03242 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ದಾನಾಪುರ, ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ 28.07.2024 ರವರೆಗೆ ಸಂಚರಿಸಲಿದೆ (13 ಟ್ರಿಪ್).

ರೈಲುಗಳ ನಿಲುಗಡೆ ಮತ್ತು ಸಂಚಾರ ಮುಂದುವರೆಸಿರುವ ಬಗ್ಗೆ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಗಾಳಿಪಟ ಹಿಡಿಯಲು ಹೋಗಿ ರೈಲು​ ಡಿಕ್ಕಿ; ಇಬ್ಬರು ಮಕ್ಕಳು ಸಾವು - Children Died

ABOUT THE AUTHOR

...view details