ಕರ್ನಾಟಕ

karnataka

ETV Bharat / state

ದಾವಣಗೆರೆ: ತಂದೆಯ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ - Son Commits Suicide

ತಂದೆಯ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಆತ್ಮಹತ್ಯೆ
ಆತ್ಮಹತ್ಯೆ (ETV Bharat)

By ETV Bharat Karnataka Team

Published : May 13, 2024, 2:26 PM IST

ದಾವಣಗೆರೆ:ತಂದೆಯ ಸಾವಿನಿಂದ ನೊಂದ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಸಮೀಪದ ಚೀಲಾಪುರ ಗ್ರಾಮದಲ್ಲಿ ನಡೆದಿದೆ.

ಚೀಲಾಪುರ ಗ್ರಾಮದ ಚಂದ್ರನಾಯ್ಕ (65) ಗುರುವಾರ ಬೆಳಗ್ಗೆ ಮೃತಪಟ್ಟಿದ್ದರು. ಇದರಿಂದ ಬೇಸತ್ತು ಪುತ್ರ ಶಿವಕುಮಾರ್ (32) ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಕುಮಾರ್‌ಗೆ ಎಂಟು ವರ್ಷಗಳ ಹಿಂದೆ ಕಬ್ಬು ಕಡಿಯುವಾಗ ಎಡಗೈ ತುಂಡಾಗಿತ್ತು. ಪುತ್ರನಿಗಾಗಿ ತಂದೆ ಚಂದ್ರನಾಯ್ಕ ಆಸ್ಪತ್ರೆ ಇನ್ನಿತರೆ ಖರ್ಚಿಗೆ ಹಲವೆಡೆ ಸಾಲ ಮಾಡಿದ್ದರು. ಅವಿವಾಹಿತನಾಗಿದ್ದ ಶಿವಕುಮಾರ್‌ಗೆ ತಂದೆಯೇ ಎಲ್ಲವೂ ಆಗಿದ್ದರು. ಹೀಗಾಗಿ ತಂದೆಯ ನಿಧನದಿಂದ ಮುಂದಿನ ಜೀವನದ ಬಗ್ಗೆ ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರ ರವಿಕುಮಾ‌ರ್ ತಿಳಿಸಿದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ದಕ್ಷಿಣ ಕನ್ನಡ: ತಂದೆಯ ಮರಣದ ಚಿಂತೆ, ಮನನೊಂದು ಆತ್ಮಹತ್ಯೆಗೆ ಶರಣಾದ ಪುತ್ರ - young man committed suicide

ABOUT THE AUTHOR

...view details