ದೇವನಹಳ್ಳಿ:ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ 25 ಐ-ಫೋನ್ ಮತ್ತು 5 ಆಪಲ್ ವಾಚ್ಗಳನ್ನು ಸಾಗಿಸುತ್ತಿದ್ಧ ಉಡುಪಿ ಮೂಲದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಈ ವ್ಯಕ್ತಿಯಿಂದ ಸುಮಾರು 30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಜುಲೈ 20 ಶನಿವಾರ, ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್ (ಇಕೆ-568) ವಿಮಾನದಲ್ಲಿ ಬಂದ ಪ್ರಯಾಣಿಕನನ್ನು ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಕಸ್ಟಮ್ಸ್ನ ಏರ್ ಇಂಟೆಲಿಜೆನ್ಸ್ ಯೂನಿಟ್ನ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ, ಅಕ್ರಮವಾಗಿ ವಿದೇಶದಿಂದ ತಂದಿರುವ ಐ-ಫೋನ್ ಮತ್ತು ಆಪಲ್ ವಾಚ್ಗಳು ಪತ್ತೆಯಾಗಿವೆ. ಕಸ್ಟಮ್ಸ್ ಮೂಲದ ಪ್ರಕಾರ ಉಡುಪಿ ಮೂಲದ ಕುಂದಾಪುರ ತಾಲೂಕಿನ ತಬ್ರೇಜ್ ಅಹಮದ್ ಗೋಳಿಹೊಳೆ ಎಂಬ ಪ್ರಯಾಣಿಕ ಎಂದು ತಿಳಿದುಬಂದಿದೆ.