ಕರ್ನಾಟಕ

karnataka

ETV Bharat / state

ಮಂಗಳೂರಲ್ಲಿ ಕದ್ದು ರೈಲಿನಲ್ಲಿ ಎಸ್ಕೇಪ್ ಆಗುತ್ತಿದ್ದ ಕಳ್ಳರು: ತುರ್ತು ಕಾರ್ಯಾಚರಣೆ ನಡೆಸಿ ಹಿಡಿದ ಪೊಲೀಸ್ರು! - Robbery Case - ROBBERY CASE

ಮಂಗಳೂರಿನಲ್ಲಿ ನಡೆದ ನಾಲ್ಕು ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿ, ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Six accused arrested in robbery case
ಬಂಧಿತ ಆರೋಪಿಗಳೊಂದಿಗೆ ಪೊಲೀಸ್​ ಸಿಬ್ಬಂದಿ (ETV Bharat)

By ETV Bharat Karnataka Team

Published : Jul 13, 2024, 3:22 PM IST

ಮಂಗಳೂರು:ನಗರದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಮನೆಗಳ ಮತ್ತು ಪಂಪ್‌ವೆಲ್‌ ಕಪಿತಾನಿಯೋ ಬಳಿಯ ಅಂಗಡಿಯಲ್ಲಿ ಕಳವು ಪ್ರಕರಣವನ್ನು ಭೇದಿಸಿದ ಮಂಗಳೂರು ಪೊಲೀಸರು, ನಾಲ್ವರನ್ನು ಬಂಧಿಸಿ 10 ಲಕ್ಷ ನಗದು ಸೇರಿದಂತೆ 12.50 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಜೇಶ್ವರದ ಮಹಮ್ಮದ್ ಸಿಯಾಬ್, ಬಜ್ಪೆಯ ಮುಹಮ್ಮದ್ ಅರ್ಫಾಝ್, ಸಫ್ವಾನ್ ಹಾಗೂ ಉತ್ತರಪ್ರದೇಶ ಮೂಲದ ಮುಹಮ್ಮದ್ ನಜೀರ್ ಹೌಸಿಲ್ ಖಾನ್ ಮತ್ತು ಇಲಿಯಾಸ್ ಖಾನ್ ಬಂಧಿತ ಆರೋಪಿಗಳು.

ಕಳೆದ 2-3 ತಿಂಗಳಿನಿಂದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ 3 ಮನೆಗಳಲ್ಲಿ ಕಳವು ನಡೆದಿತ್ತು. ಪ್ರಕರಣದಲ್ಲಿ 9,25,000 ಲಕ್ಷ ಮೌಲ್ಯದ ಸೊತ್ತು ಕಳವಾಗಿತ್ತು. ಜು.10ರಂದು ಮುದುಂಗಾರಕಟ್ಟೆ, ಚೆಕ್ ಪಾಯಿಂಟ್‌ ಬಳಿ ಬಂದ ಕಾರನ್ನು ಪೊಲೀಸರು ತಪಾಸಣೆ ನಡೆಸಿದಾಗ ಕಾರಿನಲ್ಲಿ ಮಾರಕಾಯುಧ, ಮಂಕಿಕ್ಯಾಪ್, ಹ್ಯಾಂಡ್‌ ಗ್ಲೌಸ್ ಪತ್ತೆಯಾಗಿದೆ‌. ತಕ್ಷಣ ಅದನ್ನು ವಶಪಡಿಸಿ, ಕಾರಿನಲ್ಲಿದ್ದ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮನೆಗಳವು ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ‌. ಆರೋಪಿಗಳು ನೀಡಿದ ಮಾಹಿತಿಯಂತೆ ಮುಹಮ್ಮದ್ ಜಂಶೀರ್‌ ಎಂಬಾತನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳೊಂದಿಗೆ ಪೊಲೀಸ್​ ಸಿಬ್ಬಂದಿ (ETV Bharat)

ಎಸ್ಕೇಪ್ ಆಗುತ್ತಿದ್ದ ಕಳ್ಳರು ಬಲೆಗೆ ಬಿದ್ದಿದ್ದು ಹೇಗೆ?:ಮತ್ತೊಂದು ಪ್ರಕರಣದಲ್ಲಿ ಜು.8ರಂದು ರಾತ್ರಿ ಪಂಪ್‌ವೆಲ್ ಕಪಿತಾನಿಯೊದ ದಿನಸಿ ಅಂಗಡಿ ಶೆಟರ್ ಮುರಿದು ಕ್ಯಾಶ್ ಕೌಂಟರ್‌ನಲ್ಲಿದ್ದ 10.20ಲಕ್ಷ ನಗದು ದೋಚಲಾಗಿತ್ತು. ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ರಿಕ್ಷಾ ಡ್ರೈವರ್‌ಗಳಿಂದ ರಾತ್ರಿ ವೇಳೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟಿರುವ ಮಾಹಿತಿ ದೊರಕಿದೆ‌. ಇಬ್ಬರೂ ಉತ್ತರಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣಿಸಿರುವ ಬಗ್ಗೆ ತಿಳಿದು ಬಂದಿದೆ‌. ರೈಲು ಮಹಾರಾಷ್ಟ್ರದ ಸತಾರ ದಾಟಿ ಮುಂದೆ ಹೋಗುತ್ತಿತ್ತು. ತಕ್ಷಣ ಪುಣೆ ಪೊಲೀಸರಿಗೆ ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಅದರಂತೆ ಆರೋಪಿಗಳ ಚಹರೆ ಹಾಗೂ ಧರಿಸಿರುವ ಬಟ್ಟೆಗಳ ಆಧಾರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.

ವಶಪಡಿಸಿಕೊಂಡ ನಗದು (ETV Bharat)

ಬಳಿಕ ಕಂಕನಾಡಿ ಪೊಲೀಸರು ಪುಣೆಗೆ ಹೋಗಿ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ. ಅವರಿಬ್ಬರನ್ನು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಅವರು ರೈಲ್ವೆ ಪ್ಲ್ಯಾಟ್‌ಫಾರಂನ ಮತ್ತೊಂದೆಡೆ ಹಣದ ಬ್ಯಾಗ್ ಬಚ್ಚಿಟ್ಟಿದ್ದರು‌‌. ಆ ಬ್ಯಾಗ್‌ನಲ್ಲಿದ್ದ 10.13 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಉಡುಪಿ; ಪ್ರಿಯಕರನ ಜೊತೆಗಿನ ಮಗಳ ಖಾಸಗಿ ವಿಡಿಯೋ ಹರಿಬಿಟ್ಟ ತಂದೆ: ದೂರು ನೀಡಿದ ತಾಯಿ - Daughter private video viral

ABOUT THE AUTHOR

...view details