ಕರ್ನಾಟಕ

karnataka

ETV Bharat / state

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಲಿ: ಸಂಸದ ಯದುವೀರ್‌ ಒಡೆಯರ್ - MP YADUVEER WODEYAR

ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಸಂಸದ ಯದುವೀರ್‌ ಒಡೆಯರ್ ಹೇಳಿದರು.

MP Yaduveer Wodeyar
ಸಂಸದ ಯದುವೀರ್‌ ಒಡೆಯರ್ (ETV Bharat)

By ETV Bharat Karnataka Team

Published : Jan 18, 2025, 6:27 PM IST

Updated : Jan 18, 2025, 8:14 PM IST

ಮೈಸೂರು:"ಮುಡಾ ಪ್ರಕರಣದಲ್ಲಿ ಇಡಿ 300 ಕೋಟಿ ಮೌಲ್ಯದ 142 ನಿವೇಶನಗಳನ್ನು ವಶಪಡಿಸಿಕೊಂಡಿದ್ದು, ಈ ವಿಷಯದಲ್ಲಿ ಸಿದ್ದರಾಮಯ್ಯನವರ ಹೆಸರು ತಳುಕು ಹಾಕಿಕೊಂಡಿದೆ . ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು , ತನಿಖೆಗೆ ಸಹಕರಿಸಬೇಕು" ಎಂದು ಮೈಸೂರಿನಲ್ಲಿ ಸಂಸದ ಯದುವೀರ್‌ ಒಡೆಯರ್‌ ಹೇಳಿಕೆ ನೀಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಮುಡಾ ಹಗರಣದಲ್ಲಿ ಸಿಎಂ ಹೆಸರು ತಳುಕು ಹಾಕಿಕೊಂಡಿದ್ದು, ಈ ಇಡಿ 300 ಕೋಟಿ ಮೌಲ್ಯದ 142 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈಗಲಾದರೂ ಮುಖ್ಯಮಂತ್ರಿ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಬಳಿಕ ತಪ್ಪಿತಸ್ಥರು ಅಲ್ಲ ಎಂದ ಮೇಲೆ ಪುನಃ ಅಧಿಕಾರಕ್ಕೆ ಬರಲಿ. ಮುಡಾ ಹಗರಣದ ತನಿಖೆ ಇನ್ನೂ ಮುಗಿದಿಲ್ಲ. ಈಗಾಗಲೇ ಸೈಟ್‌ ವಾಪಸ್‌ ಕೊಟ್ಟು ತಪ್ಪು ಒಪ್ಪಿಕೊಂಡಿದ್ದಾರೆ. ಈಗಲಾದರೂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಎದುರಿಸಲಿ" ಎಂದರು.

ಸಂಸದ ಯದುವೀರ್‌ ಒಡೆಯರ್ (ETV Bharat)

"ಬೆಂಗಳೂರು ಅರಮನೆ ಟಿಡಿಆರ್ ವಿಚಾರದಲ್ಲಿ ಮೊದಲಿನಿಂದಲೂ ಅರಮನೆ ಟಾರ್ಗೆಟ್‌ ಆಗಿದೆ. ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಇದ್ದಾಗಿನಿಂದಲೂ ಅದು ಮುಂದುವರೆದಿದ್ದು, ನಮ್ಮ ತಾಯಿ ಪ್ರಮೋದಾ ದೇವಿ ಒಡೆಯರ್‌ ಕಾನೂನು ಹೋರಾಟ ಮುಂದುವರೆಸಿಕೊಂಡು, ಅರಮನೆ ಆಸ್ತಿಯನ್ನು ರಕ್ಷಣೆ ಮಾಡುತ್ತಿದ್ದಾರೆ" ಎಂದರು.

ಪ್ರತಾಪ್‌ ಸಿಂಹ ಜತೆ ಮಾತನಾಡುತ್ತೇನೆ:ಮಾಜಿ ಸಂಸದ ಪ್ರತಾಪ್‌ ಸಿಂಹ ಅವರ, "ಇತ್ತೀಚಿನ ನಡವಳಿಕೆಯಿಂದ ಕಾರ್ಯಕರ್ತರಿಗೆ ಬೇಸರವಾಗಿದೆ. ಅವರು ಪಕ್ಷದ ತತ್ವ ಸಿದ್ಧಾಂತದ ಪ್ರಕಾರ ನಡೆದುಕೊಳ್ಳಬೇಕು. ಇತ್ತೀಚಿಗೆ ಅವರ ನಡವಳಿಕೆಯಿಂದ ಬೇಸರಗೊಂಡ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು, ರಾಜಾಧ್ಯಕ್ಷರಿಗೆ ದೂರು ನೀಡಿದ್ದಾರೆ. ಆದರು ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷಕ್ಕೆ ಧಕ್ಕೆ ಬರದ ರೀತಿಯಲ್ಲಿ, ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದ ಯದುವೀರ್‌ ಒಡೆಯರ್‌ ಅವರ ಜತೆ ಮಾತನಾಡುತ್ತೇನೆ" ಎಂದರು.

ಇದನ್ನೂ ಓದಿ:ಮುಡಾದ 300 ಕೋಟಿ ಆಸ್ತಿ EDಯಿಂದ ಮುಟ್ಟುಗೋಲು: ಕೇಂದ್ರದ ವಿರುದ್ಧ ಸುರ್ಜೇವಾಲಾ ಕಿಡಿ

Last Updated : Jan 18, 2025, 8:14 PM IST

ABOUT THE AUTHOR

...view details