ಕರ್ನಾಟಕ

karnataka

ETV Bharat / state

ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ: ಮಠದಿಂದ ಮೃಗಾಲಯಕ್ಕೆ ಒಂದು ಲಕ್ಷ ದೇಣಿಗೆ - One Lakh donation to Zoo

ಶುಕ್ರವಾರದಂದು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಅಂಗವಾಗಿ ಮಠದಿಂದ ಮೃಗಾಲಯಕ್ಕೆ ಒಂದು ಲಕ್ಷ ದೇಣಿಗೆ ನೀಡಲಾಯಿತು.

MYSURU ZOO  RAJENDRA SWAMIJI JAYANTI  DONATION TO MYSURU ZOO  MYSURU
ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ (ETV Bharat)

By ETV Bharat Karnataka Team

Published : Aug 24, 2024, 8:13 AM IST

ಮೈಸೂರು:ಆಗಸ್ಟ್​ 25ರಂದು ನಡೆಯಲಿರುವ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೆಯ ಜಯಂತಿಯ ಅಂಗವಾಗಿ ಶ್ರೀಮಠದಿಂದ ಪ್ರತಿವರ್ಷದಂತೆ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ-ಪಕ್ಷಿಗಳ ಆಹಾರದ ನಿರ್ವಹಣೆಗಾಗಿ ಒಂದು ಲಕ್ಷ ರೂ.ಗಳ ಚೆಕ್ಕನ್ನು ಶುಕ್ರವಾರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಿ. ಮಹೇಶ್‌ಕುಮಾರ್‌ರವರಿಗೆ ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶಕುಮಾರ್, ಕಳೆದ 15 ವರ್ಷಗಳಿಂದ ಪ್ರತಿವರ್ಷವೂ ರಾಜೇಂದ್ರ ಶ್ರೀಗಳ ಜಯಂತಿಯಂದು ಮೃಗಾಲಯದ ಪ್ರಾಣಿಪಕ್ಷಿಗಳ ಆಹಾರ ನಿರ್ವಹಣೆಗಾಗಿ ಕೊಡುಗೆ ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ. ಇದರಿಂದ ಮೃಗಾಲಯಕ್ಕೆ ಬಹಳ ಅನುಕೂಲವಾಗುತ್ತದೆ. ಸುತ್ತೂರು ಶ್ರೀಗಳು ಪ್ರಾಣಿ ಪಕ್ಷಿಗಳ ಮೇಲೆ ಅಪಾರ ಕಾಳಜಿಯನ್ನು ಹೊಂದಿರುವುದನ್ನು ಸೂಚಿಸುತ್ತದೆ. ಇದೇ ರೀತಿ ಬೇರೆ ಬೇರೆ ಸಂಘ ಸಂಸ್ಥೆಗಳು ಸಹಾಯಹಸ್ತ ಚಾಚಬೇಕು ಎಂದು ಕೋರಿದರು.

ಜಯಂತಿ ಮಹೋತ್ಸವ ಸಮಿತಿಯ ಸಂಚಾಲಕರಾದ ಪ್ರೊ. ಆರ್. ಮೂಗೇಶಪ್ಪ, ಬಿ. ನಿರಂಜನಮೂರ್ತಿ, ಗೋಪಾಲಗೌಡ ಆಸ್ಪತ್ರೆಯ ಡಾ. ಎಚ್.ವಿ. ಸಂತೃಪ್ತ್ , ಮೃಗಾಲಯದ ಸಿಬ್ಬಂದಿ ವರ್ಗದವರು ಇದ್ದರು.

ಓದಿ:ಅಂಬಾ ವಿಲಾಸ ಅರಮನೆ ಪ್ರವೇಶಿಸಿದ ದಸರಾ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ - Mysuru Dasara 2024

ABOUT THE AUTHOR

...view details