ಕರ್ನಾಟಕ

karnataka

ETV Bharat / state

ಆಸ್ತಿ ಖಾತೆ ಮಾಡಿಸಲು ₹15 ಸಾವಿರ ಲಂಚ: ಗ್ರಾ.ಪಂ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ - Lokayukta Raid - LOKAYUKTA RAID

ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾ.ಪಂ.ಕಾರ್ಯದರ್ಶಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಅಬ್ಬಲಗೆರೆ ಗ್ರಾಪಂ ಕಾರ್ಯದರ್ಶಿ ಗ್ರೇಡ್ -2 ಯೋಗೇಶ್​
ಅಬ್ಬಲಗೆರೆ ಗ್ರಾಪಂ ಕಾರ್ಯದರ್ಶಿ ಗ್ರೇಡ್ -2 ಯೋಗೇಶ್​

By ETV Bharat Karnataka Team

Published : Apr 24, 2024, 10:48 PM IST

ಶಿವಮೊಗ್ಗ: ತಾಲೂಕಿನ ಅಬ್ಬಲಗೆರೆ ಗ್ರಾ.ಪಂ.ಕಾರ್ಯದರ್ಶಿ ಗ್ರೇಡ್ -2 ಯೋಗೇಶ್ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗದ ನಿವಾಸಿ ಯಶವಂತ ಎಂಬವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಯಶವಂತ ಅವರಿಗೆ ಅಬ್ಬಲಗೆರೆ ಗ್ರಾ.ಪಂ.ವ್ಯಾಪ್ತಿಯ ಚನ್ನಮುಂಭಾಪುರದಲ್ಲಿ 10 ಗುಂಟೆ ಜಾಗ ತಮ್ಮ ತಂದೆಯಿಂದ ಬರಬೇಕಿತ್ತು. ಇದನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡಲು 6 ತಿಂಗಳ ಹಿಂದೆ ಅಬ್ಬಲಗೆರೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಪಂಚಾಯತಿ ಕಾರ್ಯದರ್ಶಿ ಯಶವಂತ ಖಾತೆ ಮಾಡಿಕೊಡಲು 15 ಸಾವಿರ ರೂ ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಈ ಕುರಿತು ಯಶವಂತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಇಂದು ಅಬ್ಬಲಗೆರೆ ಪಂಚಾಯಿತಿಯಲ್ಲಿ ಲಂಚ ಪಡೆಯುತ್ತಿದ್ದಾಗ ಯಶವಂತ ಅವರನ್ನು ಲೋಕಾಯುಕ್ತ ಅಧಿಕ್ಷಕ ವೀರಬಸಪ್ಪ ಕುಸಾಲಪುರ ತಂಡ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ. ಲೋಕಾಯುಕ್ತ ಶಿವಮೊಗ್ಗ ಅಧೀಕ್ಷಕ ಮಂಜುನಾಥ್ ಚೌಧರಿ ಮಾರ್ಗದರ್ಶನದಲ್ಲಿ ಉಪಅಧೀಕ್ಷಕ ಉಮೇಶ್ ಈಶ್ವರ್ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ಮುಡಾ ಆಯುಕ್ತ ಮನ್ಸೂರ್ ಅಲಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಣೆ - MUDA Commissioner

ABOUT THE AUTHOR

...view details