ಬೆಂಗಳೂರು: ಸ್ಕ್ಯಾಂಡ್ರಾನ್ ಪ್ರೈ ಲಿ ಕಾರ್ಗೋ ಮ್ಯಾಕ್ಸ್ 500 ಎಚ್‌ಇ ಲಾಜಿಸ್ಟಿಕ್ಸ್ ಡ್ರೋನ್‌ಗಳಿಗಾಗಿ ಡಿಜಿಸಿಇ ಪ್ರಮಾಣಪತ್ರವನ್ನು ಪಡೆದಿದೆ. ಡಿಜಿಸಿಇ ಪ್ರಮಾಣ ಪತ್ರ ಪಡೆದಿರುವ ಭಾರತದ ಮೊದಲ ಕಂಪನಿಯಾಗಿದೆ ಎಂದು ಸ್ಕ್ಯಾಂಡ್ರಾನ್ ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅರ್ಜುನ್ ನಾಯಕ್ ತಿಳಿಸಿದ್ದಾರೆ.
ನಗರದ ವಿಠ್ಠಲ್‌ಮಲ್ಯ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ವೈಮಾನಿಕ ಲಾಜಿಸ್ಟಿಕ್‌ನಲ್ಲಿ ಹೊಸ ಯುಗದ ಮುಂಚೂಣಿಯಲ್ಲಿದ್ದೇವೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಾರಂಭಿಸಿರುವ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಜೊತೆಗೆ ಸ್ಕ್ಯಾಂಡ್ರಾನ್ ಡ್ರೋನ್ಗಳನ್ನು ಸುರಕ್ಷತೆ ಮತ್ತು ವಿಶ್ವಾಸಾರ್ಹತೆ, ಉನ್ನತ ಗುಣಮಟ್ಟದಲ್ಲಿ ಪೂರೈಸಲು ಮುಂದಾಗಿದೆ. ಸ್ಕ್ಯಾಂಡ್ರಾನ್ ಕಂಪನಿಯೂ ಸಾರಿಗೆ ಅವಲಂಬಿಸಿರುವ ಕೈಗಾರಿಕೆಗಳ ಸುಸ್ಥಿರ ಮತ್ತು ಪರಿಣಾಮಕಾರಿ ವಿಕಾಸಕ್ಕೆ ಕೊಡುಗೆ ನೀಡುವ ಲಾಜಿಸ್ಟಿಕ್ಸ್ ಡ್ರೋನ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಡಿಜಿಸಿಎ ಪ್ರಕಾರ ಲಾಜಿಸ್ಟಿಕ್ಸ್ ಡ್ರೋನ್‌ನ ದೂರದ ಪ್ರದೇಶಗಳಿಗೆ ವೈದ್ಯಕೀಯ ಸಾಮಗ್ರಿ ವಿತರಣೆ ಸುಗಮಗೊಳಿಸುವುದಲ್ಲದೇ, ಇ - ಕಾಮರ್ಸ್ ಲಾಜಿಸ್ಟಿಕ್ಸ್ ಕೂಡ ಮುಖ್ಯವಾಗಿದೆ. ಹೀಗಾಗಿ ಹಬ್ - ಟು -ಹಬ್ ಡ್ರೋನ್ ಡೆಲಿವರಿಯನ್ನು ಕೈಗೊಳ್ಳಲು ನಮ್ಮ ಸಂಸ್ಥೆ ಇತ್ತೀಚೆಗೆ ಕ್ರಿಟಿಕಾಲಾಗ್ ಇಂಡಿಯಾದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ ಮಾಡಿಕೊಂಡಿದೆ. ಸ್ಕ್ಯಾಂಡ್ರಾನ್ ಮತ್ತು ಕ್ರಿಟಿಕಲಾಗ್ ತಮ್ಮ ಪಾಲುದಾರಿಕೆ ಕಾರ್ಯಗತಗೊಳಿಸಿ ಮಾರುಕಟ್ಟೆಗೆ ನವೀನ ಡ್ರೋನ್ ಆಧಾರಿತ ಲಾಜಿಸ್ಟಿಕ್ಸ್ ಗಳನ್ನು ಪರಿಚಯಿಸಲು ಅನುವು ಮಾಡಿಕೊಡಲಿದೆ. ಇ - ಕಾಮರ್ಸ್ ಮತ್ತು ಎನ್‌ಎಫ್‌ಒ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿತರಣಾ ಸೇವೆಗಳನ್ನು ಹೆಚ್ಚಿಸಲು ಲಾಜಿಸ್ಟಿಕ್ಸ್‌ನಲ್ಲಿ ಕ್ರಿಟಿಕಾಲಾಗ್‌ನ ಸಾಕಷ್ಟು ಪರಿಣಿತಿ ಹೊಂದಿದೆ ಎಂದು ಹೇಳಿದರು.