ಶಿವಮೊಗ್ಗ : ಮಲೆನಾಡಿನ ಮುಳುಗಡೆ ಕವಿ ಎಂದೇ ಖ್ಯಾತರಾಗಿದ್ದ ನಾರ್ಟಬ್ ಡಿಸೋಜ ಅವರ ಅಂತ್ಯಕ್ರಿಯೆ ಇಂದು ಸಾಗರದಲ್ಲಿ ನಡೆಯಿತು. ಕಳೆದ ಭಾನುವಾರ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದ ನಾ. ಡಿಸೋಜ ಅವರ ಅಂತ್ಯಕ್ರಿಯೆ ಸಾಗರದ ಸಂತ ಜೋಸೆಫ್ ಚರ್ಚ್ನಲ್ಲಿ ಕ್ಯಾಥೋಲಿಕ್ ಸಂಪ್ರದಾಯದಂತೆ ಕುಟುಂಬದವರ ಸಮ್ಮುಖದಲ್ಲಿಯೇ ನಡೆಯಿತು.
ಸೋಮವಾರ ಮಧ್ಯಾಹ್ನ ಮಂಗಳೂರಿನಿಂದ ಸಾಗರದ ನಾ. ಡಿಸೋಜ ಮನೆಗೆ ಅವರ ಪಾರ್ಥಿವ ಶರೀರವನ್ನು ತಂದು ಕುಟುಂಬದವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಸಾಗರದ ಬಿ. ಹೆಚ್ ರಸ್ತೆಯ ಅವರ ಮನೆಯಿಂದ ಮೆರವಣಿಗೆಯ ಮೂಲಕ ಪಾರ್ಥಿವ ಶರೀರವನ್ನು ಗಾಂಧಿ ಮೈದಾನಕ್ಕೆ ತರಲಾಯಿತು. ಇಲ್ಲಿ ತಾಲೂಕು ಆಡಳಿತ ಸಾರ್ವಜನಿಕರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು.
ಸಾಗರ ಕಸಾಪ ಅಧ್ಯಕ್ಷರಾದ ವಿ ಟಿ ಸ್ವಾಮಿ ಅವರು ಮಾತನಾಡಿದರು (ETV Bharat) ಇಲ್ಲಿಯೇ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸರು ಮೂರು ಸುತ್ತು ಕುಶಾಲತೋಪು ಹಾರಿಸಿ ನಾಡಿನ ಹಿರಿಯ ಕವಿಗೆ ಗೌರವ ವಂದನೆ ಸಲ್ಲಿಸಿದರು. ನಂತರ ನಾ. ಡಿಸೋಜ ಶರೀರವನ್ನು ಸಾಗರದ ಸಂತ ಜೋಸೆಫ್ರ ಚರ್ಚ್ಗೆ ತರಲಾಯಿತು. ಇಲ್ಲಿ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನವನ್ನು ಪೂರ್ಣಗೊಳಿಸಲಾಯಿತು. ನಂತರ ಚರ್ಚ್ ಹಿಂಭಾಗದಲ್ಲಿರುವ ಕ್ರೈಸ್ತರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮಲೆನಾಡ ಕವಿ ನಾ. ಡಿಸೋಜ ಪಾರ್ಥಿವ ಶರೀರದ ಅಂತಿಮ ದರ್ಶನ (ETV Bharat) ಸಾಗರದ ಶಾಸಕರು, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ಗಾಂಧಿ ಮೈದಾನದಲ್ಲಿದ್ದು, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಸಾಗರದ ಎಸಿ ಯತೀಶ್ ಸೇರಿದಂತೆ ತಹಶೀಲ್ದಾರ್, ಡಿವೈಎಸ್ಪಿ ಅವರು ಹಾಜರಿದ್ದರು. ನಾಡಿನ ಕವಿಗೆ ತಾಲೂಕಿನ ಶಾಲೆಯ ಎಲ್ಲಾ ಮಕ್ಕಳು ಆಗಮಿಸಿ ನುಡಿ ನಮನ ಸಲ್ಲಿಸಿದರು. ಅಂತಿಮ ವಿಧಿ ವಿಧಾನದಲ್ಲಿ ನಾ.ಡಿಸೋಜ ಅವರ ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿ ಸೇರಿದಂತೆ ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳು ಭಾಗಿಯಾದರು.
ಪಾರ್ಥಿವ ಶರೀರವನ್ನ ಮೆರವಣಿಗೆ ಮೂಲಕ ತರಲಾಯಿತು (ETV Bharat) ಈ ವೇಳೆ ಸಾಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ. ಟಿ ಸ್ವಾಮಿ ಮಾತನಾಡಿ, ನಾ. ಡಿಸೋಜ ಅವರ ಸಾಹಿತ್ಯ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಇಂದು ತಾಲೂಕು ಆಡಳಿತದ ವತಿಯಿಂದ ಉತ್ತಮವಾದ ರೀತಿಯಲ್ಲಿ ಸಾರ್ವಜನಿಕರ ದರ್ಶನ ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂದು ತಿಳಿಸಿದರು.
ಇದನ್ನೂ ಓದಿ :ಶರಾವತಿ ಹಿನ್ನೀರು ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ದ 'ದ್ವೀಪ' ; 'ಬಂಜೆ ಬೆಂಕಿ'ಯ ಹಿರಿಯ ಸಾಹಿತಿ ನಾ. ಡಿಸೋಜ ಇನ್ನಿಲ್ಲ - NA DSOUZA PASSES AWAY