ಬೆಂಗಳೂರು:ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮ ಪ್ರಕರಣದ ಕುರಿತು ದೂರುದಾರ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಇಂದು ED ವಿಚಾರಣೆಗೆ ಹಾಜರಾಗಿದ್ದಾರೆ.
ಶಾಂತಿನಗರದ ಇಡಿ ಕಚೇರಿಗೆ ಹಾಜರಾದ ಗಂಗರಾಜು ಪ್ರತಿಕ್ರಿಯಿಸಿ, "ವಿಚಾರಣೆಗೆ ಹಾಜರಾಗುವಂತೆ ಅಕ್ಟೋಬರ್ 22ರಂದು ನನಗೆ ನೋಟಿಸ್ ನೀಡಲಾಗಿತ್ತು. ಆದರೆ, ಅಕ್ಟೋಬರ್ 23ರಂದು ಸಂಜೆ 4ಗಂಟೆಗೆ ನನಗೆ ನೋಟಿಸ್ ತಲುಪಿದ ಕಾರಣ ಕಾಲಾವಕಾಶ ಕೇಳಿದ್ದೆ. ಅದರಂತೆ ಅಕ್ಟೋಬರ್ 24ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಇಂದು ವಿಚಾರಣೆಗೆ ನಾನು ಹಾಜರಾಗಿದ್ದೇನೆ" ಎಂದರು.
ಆರ್.ಟಿ.ಐ. ಕಾರ್ಯಕರ್ತ ಗಂಗರಾಜು ಹೇಳಿಕೆ (ETV Bharat) ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆ 50:50 ಅನುಪಾತದ ಹಗರಣ ಸೇರಿದಂತೆ 1929 ರಿಂದ ಇಲ್ಲಿಯವರಿಗಿನ ಬೆಳವಣಿಯ ಸಾವಿರಾರು ಪುಟದ ದಾಖಲೆಗಳಿವೆ ಎಂದು ಹೇಳಿದ್ದೆ. ಅದಕ್ಕೆ ಇಂಬು ನೀಡುವಂತೆ ಇಡಿ ದಾಳಿ ನಡೆದಿದೆ ಎಂದಿದ್ದಾರೆ. ಇಡಿ ಅಧಿಕಾರಿಗಳು ನನ್ನ ಬಳಿ ವೈಯಕ್ತಿಕ ದಾಖಲೆಗಳನ್ನು ಕೂಡ ಕೇಳಿದ್ದಾರೆ. ನನಗೆ ಲೋಕಾಯುಕ್ತದ ಮೇಲೆ ನಂಬಿಕೆಯಿಲ್ಲ, ಇಡಿ ತನಿಖೆಯ ಮೇಲೆ ನಂಬಿಕೆಯಿದೆ" ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಇದನ್ನೂ ಓದಿ:ಮುಡಾ ಪ್ರಕರಣ: ಬೆಂಗಳೂರು, ಮೈಸೂರು ಸೇರಿ 9 ಕಡೆ ಇಡಿ ಅಧಿಕಾರಿಗಳಿಂದ ದಾಳಿ, ದಾಖಲೆ ಪರಿಶೀಲನೆ