ಕರ್ನಾಟಕ

karnataka

ETV Bharat / state

ತುಮಕೂರು: ತಂತಿ ಬೇಲಿಗೆ ಸಿಲುಕಿದ್ದ ಕರಡಿಯ ರಕ್ಷಣೆ: ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಸೆರೆ - Rescue of bear

ಹುಳಿಯಾರು ಬಳಿಯ ಗವಿರಂಗನಾಥ ಸ್ವಾಮಿ ಬೆಟ್ಟದ ಸಮೀಪ ತಂತಿ ಬೇಲಿಗೆ ಸಿಲುಕಿ ಹಾಕಿಕೊಂಡಿದ್ದ ಕರಡಿಯನ್ನು ಗ್ರಾಮಸ್ಥರು ರಕ್ಷಿಸಿದರೆ, ಹೊನ್ನುಡಿಕೆ ಗ್ರಾಮದಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೋನ್​ ಇಟ್ಟ್ ಸೆರೆ ಹಿಡಿದಿದ್ದಾರೆ.

Rescue of a bear trapped in a wire fence, capture of a leopard which disturbed public sleep in Tumakuru
ತಂತಿ ಬೇಲಿಗೆ ಸಿಲುಕಿದ್ದ ಕರಡಿಯ ರಕ್ಷಣೆ, ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಸೆರೆ (ETV Bharat)

By ETV Bharat Karnataka Team

Published : Sep 6, 2024, 7:16 PM IST

Updated : Sep 6, 2024, 7:43 PM IST

ತುಮಕೂರು: ತಂತಿ ಬೇಲಿಗೆ ಸಿಲುಕಿದ್ದ ಕರಡಿಯ ರಕ್ಷಣೆ, ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಸೆರೆ (ETV Bharat)

ತುಮಕೂರು:ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಬಳಿಯ ಗವಿರಂಗನಾಥ ಸ್ವಾಮಿ ಬೆಟ್ಟದ ಸಮೀಪ ತಂತಿ ಬೇಲಿಗೆ ಸಿಲುಕಿ ಹಾಕಿಕೊಂಡಿದ್ದ ಕರಡಿಯನ್ನು ಬಿಡಿಸಿಕೊಳ್ಳಲು ಮತ್ತೊಂದು ಕರಡಿ ಹರಸಾಹಸ ಪಡುತ್ತಿರುವ ದೃಶ್ಯ ಮನಕಲಕುವಂತಿದೆ. ಹುಳಿಯಾರು ಸಮೀಪದ ಹೆಗ್ಗೆರೆ ಗ್ರಾಮದ ಬಳಿ ಘಟನೆ ನಡೆದಿದ್ದು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮತ್ತೊಂದು ಕರಡಿ ಅದನ್ನು ಬಿಡಿಸಿಕೊಳ್ಳಲು ಒದ್ದಾಡಿದೆ. ನಂತರ ಗ್ರಾಮಸ್ಥರು ಜೆಸಿಬಿ ಬಳಸಿ ಬೇಲಿಗೆ ಸಿಲುಕಿದ್ದ ಕರಡಿಯನ್ನು ಬಿಡಿಸಿದ್ದಾರೆ.

ಚಿರತೆ ಸೆರೆ:ಅನೇಕ ತಿಂಗಳುಗಳಿಂದ‌ ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನ್​ನಲ್ಲಿ ಸೆರೆಯಾಗಿದೆ. ತುಮಕೂರು ತಾಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ಚಿರತೆ ಸೆರೆಗಾಗಿ ಬೋನ್​ ಇಡಲಾಗಿತ್ತು. ಬೋನ್​ಗೆ ಬಿದ್ದ ಸುಮಾರು 1.5 ವರ್ಷದ ಗಂಡು‌ ಚಿರತೆ, ಕಳೆದ ಎರಡ್ಮೂರು ತಿಂಗಳುಗಳಿಂದ ಹೊನ್ನುಡಿಕೆ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡಿತ್ತು.

ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದ ಗ್ರಾಮಸ್ಥರ ಮನವಿ ಮೇರೆಗೆ ಡಿಎಫ್ಒ ಅನುಪಮಾ ನೇತೃತ್ವದಲ್ಲಿ ಎಸಿಎಫ್ ಮಹೇಶ್ ಮಾಲಗತಿ ಆರ್​​ಎಫ್​ಒ ನಿಮತಾ, ಡಿಆರ್​​ಎಫ್ ರಬ್ಬನಿ ತಂಡವು ಕಾರ್ಯಚರಣೆ ನಡೆಸಿದೆ. ಚಿರತೆಯನ್ನು ಸೆರೆ ಹಿಡಿದಿರುವುದು ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ:ಕಾರವಾರ: ನಾಯಿ ಅಟ್ಟಿಸಿಕೊಂಡು ಬಂದ ಚಿರತೆ ಬಾವಿಗೆ ಬಿದ್ದು ಸಾವು

Last Updated : Sep 6, 2024, 7:43 PM IST

ABOUT THE AUTHOR

...view details