ಬೆಂಗಳೂರು:ನಟ ದರ್ಶನ್ ಅಂಡ್ ಟೀಂನಿಂದ ನಡೆದಿದೆ ಎಂಬ ಆರೋಪ ಇರುವ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿಗಳಿಗೆ ಸಂಬಂಧಿಸಿದ ಪ್ರಮುಖ ಸ್ಥಳಗಳಲ್ಲಿ ಮಹಜರು ನಡೆಸಿ ಅಗತ್ಯ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಆರೋಪಿಗಳ ಕೃತ್ಯದ ಕುರಿತು ಇಂಚಿಂಚೂ ಜಾಲಾಡಿರುವುದರ ಕುರಿತು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಅದರ ಪ್ರತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣ- ಮಹಜರು ಮಾಡಿರುವ ಸ್ಥಳಗಳು:
- ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳ ಸಮ್ಮುಖದಲ್ಲಿ ಪಟ್ಟಣಗೆರೆ ಶೆಡ್ನಲ್ಲಿ ಮಹಜರು
- ಗಿರಿನಗರದಲ್ಲಿರುವ ಪ್ರದೋಶ್ ನಿವಾಸದಲ್ಲಿ ಸ್ಥಳ ಮಹಜರು
- ಶವ ಎಸೆದಿದ್ದ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಬಳಿ ಮಹಜರು
- ರೇಣುಕಾಸ್ವಾಮಿ ಕೊಲೆಯಾದ ಪಟ್ಟಣಗೆರೆ ಜಯಣ್ಣ ಶೆಡ್ನಲ್ಲೂ ಪಂಚನಾಮೆ
- ಆರ್.ಆರ್. ನಗರದ ಐಡಿಯಲ್ ಹೋಮ್ಸ್ ಇ- ಕ್ರಾಸ್ನಲ್ಲಿ ಮಹಜರು (ರಾಘವೇಂದ್ರ ಎಸೆದಿದ್ದ ಶರ್ಟ್ ಸಂಗ್ರಹ)
- ಚಿತ್ರದುರ್ಗದಿಂದ ಅಪಹರಣಕ್ಕೆ ಬಳಸಿದ್ದ ಕಾರು ಪರಿಶೀಲನೆ (ಕಾರಿನೊಳಗೆ ರಕ್ತ, ಕೂದಲು ಪತ್ತೆ)
- ಸುಮನಹಳ್ಳಿಯ ರಾಜಕಾಲುವೆಯಲ್ಲಿ ಮೊಬೈಲ್ಗಾಗಿ ಮಹಜರು
- ಟ್ರೋಬೋ ಹೋಟೆಲ್ 98 ಸ್ಟ್ರೀಟ್‌ನ ರೂಮ್ ನಂ. 203ರಲ್ಲಿ ಮಹಜರು (ಕೃತ್ಯದ ದಿನ ಕಾರ್ತಿಕ್ ಧರಿಸಿದ್ದ ಬಟ್ಟೆಗಳ ಸಂಗ್ರಹ)
- ಆರ್.ಆರ್. ನಗರದ ದರ್ಶನ್ ನಿವಾಸದಲ್ಲೂ ಪಂಚನಾಮೆ (ಕೃತ್ಯದ ದಿನ ದರ್ಶನ್ ಧರಿಸಿದ್ದ ಬಟ್ಟೆ, ಶೂ ವಶಕ್ಕೆ)
- ಪವಿತ್ರಾ ಗೌಡ ಕರೆದೊಯ್ದು ಆರ್.ಆರ್. ನಗರದ ನಿವಾಸದಲ್ಲಿ ಪಂಚನಾಮೆ
- ಆರೋಪಿ ದೀಪಕ್ ಕರೆದೊಯ್ದು ಮನೆಯಲ್ಲಿ ಮಹಜರು
- ಆರೋಪಿ ವಿನಯ್ ಕರೆದೊಯ್ದು ಸ್ಟೋನಿ ಬ್ರೂಕ್ ರೆಸ್ಟೋಬಾರ್ನಲ್ಲಿ ಮಹಜರು
- ದರ್ಶನ್ ಪತ್ನಿ ವಿಜಯಲಕ್ಷ್ಮಿ ನಿವಾಸ (ದರ್ಶನ್ ಅವರ ನೀಲಿ ಬಣ್ಣದ ಶೂ ವಶಕ್ಕೆ)
- ಮೈಸೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ಮಹಜರು
- ಸ್ಟೋನಿ ಬ್ರೂಕ್ ರೆಸ್ಟೋಬಾರ್ಗೆ ದರ್ಶನ್ ಕರೆತಂದು ಮಹಜರು