ಕರ್ನಾಟಕ

karnataka

ETV Bharat / state

ಪ್ಲೇಆಫ್‌ವರೆಗಿನ ಆರ್​ಸಿಬಿ ಹಾದಿ ಭವಿಷ್ಯದಲ್ಲಿ ಇತರೆ ತಂಡಗಳಿಗೆ ಪ್ರೇರಣೆ: ದಿನೇಶ್ ಕಾರ್ತಿಕ್ - Dinesh Karthik - DINESH KARTHIK

ಆರ್​ಸಿಬಿಯ ಐತಿಹಾಸಿಕ ಕಮ್ ಬ್ಯಾಕ್ ಭವಿಷ್ಯದಲ್ಲಿ ಇತರೆ ತಂಡಗಳಿಗೂ ಸ್ಫೂರ್ತಿ ಎಂದು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್ (rcb)

By ETV Bharat Karnataka Team

Published : May 19, 2024, 9:15 PM IST

ಬೆಂಗಳೂರು: ಐಪಿಎಲ್ 2024ರಲ್ಲಿ ಆರಂಭಿಕ ವೈಫಲ್ಯಗಳ ಬಳಿಕ ಸತತ ಆರು ಪಂದ್ಯಗಳನ್ನ ಗೆದ್ದು ಪ್ಲೇ ಆಫ್ ಸುತ್ತಿಗೇರಿರುವ ಆರ್​ಸಿಬಿಯ ಸಾಧನೆ ಬಹುಕಾಲ ಸ್ಮರಣೀಯವಾಗಿರಲಿದೆ ಎಂದು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ಸಿಎಸ್​ಕೆ ತಂಡದೆದುರು ಜಯಶಾಲಿಯಾದ ಬಳಿಕ ತಂಡದ ಡ್ರೆಸ್ಸಿಂಗ್ ರೂಮ್​ನಲ್ಲಿ ಸಂಭ್ರಮಾಚರಣೆಯ ಬಳಿಕ ಮಾತನಾಡಿದ ಅವರು, ಆರ್​ಸಿಬಿಯ ಈ ಐತಿಹಾಸಿಕ ಕಮ್ ಬ್ಯಾಕ್ ಭವಿಷ್ಯದಲ್ಲಿ ಇತರೆ ತಂಡಗಳಿಗೂ ಸ್ಫೂರ್ತಿ ಎಂದರು.

ಈ ಪಯಣದ ಕುರಿತು ನಾವು ಹೆಮ್ಮೆ ಪಡಬೇಕು, ಎಂಟು ಪಂದ್ಯಗಳ ಬಳಿಕ ನಾವು ಉಳಿದ ಆರೂ ಪಂದ್ಯಗಳನ್ನ ಗೆಲ್ಲುವ ಅನಿವಾರ್ಯತೆಯಿತ್ತು. ನಾವು ಸಾಧಿಸಿರುವುದನ್ನ ಅಭಿಮಾನಿಗಳು ನೆನಪಿನಲ್ಲಿಡುತ್ತಾರೆ. ಐಪಿಎಲ್​ನಲ್ಲಿ ಪ್ರತೀ ವರ್ಷ ಮೊದಲ ಏಳು ಪಂದ್ಯಗಳ ಬಳಿಕ ಬಹುಶಃ ಒಂದು ಅಥವಾ ಎರಡು ತಂಡಗಳು ಇದೇ ಪರಿಸ್ಥಿತಿ ಎದುರಿಸುತ್ತವೆ. ಮತ್ತು ಆರ್​ಸಿಬಿ ಇಂಥದ್ದೊಂದು ಕಮ್ ಬ್ಯಾಕ್ ಮಾಡಿತ್ತು ಎಂಬುದನ್ನ ನೆನಪಿಸಿಕೊಳ್ಳುತ್ತಾರೆ, ನಾವೂ ಅದನ್ನ ಮಾಡಬಲ್ಲೆವು ಎಂದು ಪ್ರೇರಿತರಾಗುತ್ತಾರೆ. ನಾವು ಸಾಧಿಸಿರುವುದು ಖಂಡಿತಾ ಸುಲಭದ ಹಾದಿಯಾಗಿರಲಿಲ್ಲ, ಅದಕ್ಕಾಗಿ ನಾವಿಂದು ಹೆಮ್ಮೆ ಪಡಬೇಕು ಎಂದು ಹೇಳಿದರು.

ಎಲಿಮಿನೇಟರ್ ಪಂದ್ಯದ ಕುರಿತು ಮಾತನಾಡಿದ ಅವರು‌, 'ಅನೇಕ ದಶಕಗಳವರೆಗೆ ಅಭಿಮಾನಿಗಳು ನಮ್ಮನ್ನು ನೆನಪಿಟ್ಟುಕೊಳ್ಳುವಂಥಹ ಕೆಲಸವನ್ನು ಮಾಡಲು ನಾವು ಹೊರಟಿದ್ದೇವೆ. ‘ವಾವ್, ಆರ್‌ಸಿಬಿ ತಂಡ ವಿಶೇಷವಾಗಿತ್ತು’ ಎಂದು ಅವರು ಹೇಳುವ ಪ್ರಯಾಣ ಇದಾಗಿದೆ. ನಾವು ಆ ಪ್ರಯಾಣದಲ್ಲಿದ್ದೇವೆ. ನಾವು ವಿಶೇಷವಾದದ್ದನ್ನು ಮಾಡಬಹುದು. ಚೆನ್ನೈ ವಿರುದ್ಧದ ಪಂದ್ಯ, ಹಲವು ವರ್ಷಗಳ ಕಾಲ ನೆನಪಿನಲ್ಲಿರುವಂಥಹುದ್ದು, ಪಂದ್ಯಕ್ಕೂ ಮುನ್ನ ನಮಗೆ ವಿಶ್ವಾಸವಿತ್ತು, ನಾವು ಹಾಲಿ ಚಾಂಪಿಯನ್‌ಗಳ ವಿರುದ್ಧ ಆಡಿದ್ದೇವೆ ಮತ್ತು ಚೆನ್ನೈ ವಿರುದ್ಧ ಕೊನೆಯವರೆಗೂ ನಾವು ಆಡಿದ ರೀತಿ ಬಗ್ಗೆ ನಿಜವಾಗಿಯೂ ಹೆಮ್ಮೆಪಡಬೇಕು ಎಂದರು.

ಆರ್​ಸಿಬಿ ತಂಡವನ್ನ ಅತ್ಯುತ್ತಮ ಫೀಲ್ಡಿಂಗ್ ಘಟಕ ಎಂದು ಶ್ಲಾಘಿಸಿದ ಕಾರ್ತಿಕ್, ಫಾಫ್ ಡು ಪ್ಲೆಸಿಸ್ ಮತ್ತು ಸ್ವಪ್ನಿಲ್ ಸಿಂಗ್ ಅವರ ಕ್ಯಾಚಿಂಗ್ ಹೀರೋಯಿಕ್ಸ್ ಕುರಿತು ಸಹ ಪ್ರಸ್ತಾಪಿಸಿದರು. “ಈ ಪಂದ್ಯಾವಳಿಯಲ್ಲಿ ನಾವು ನಿಸ್ಸಂದೇಹವಾಗಿ ಅತ್ಯುತ್ತಮ ಫೀಲ್ಡಿಂಗ್ ತಂಡ ಎಂದು ಹೆಮ್ಮೆಯಿಂದ ಹೇಳಬಹುದು. ಫಾಫ್ ಹಿಡಿದ ಆ ಕ್ಯಾಚ್ ವಿಶೇಷವಾಗಿತ್ತು. ಸ್ವಪ್ನಿಲ್‌ನ ಕ್ಯಾಚ್‌ ಕೂಡ ಅತ್ಯಂತ ಮಹತ್ವ ಮತ್ತು ಗಂಭೀರವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ತಂಡವಾಗಿ ನಾವು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಯಶ್ ದಯಾಳ್ ಎಂಬ ಆರ್​​ಸಿಬಿ ಪಾಲಿನ ಹೀರೋ: ಟೀಂ ಗೆಲ್ಲಿಸಿ ಟೀಕಾಕಾರರಿಗೆ ಬೌಲರ್​ ತಿರುಗೇಟು - Yash Dayal

ABOUT THE AUTHOR

...view details