ಕರ್ನಾಟಕ

karnataka

ETV Bharat / state

ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ: ಅಧ್ಯಕ್ಷರು ಸೇರಿ ನೂರಾರು ಗುತ್ತಿಗೆದಾರರು ಪೊಲೀಸ್ ವಶಕ್ಕೆ - BBMP Contractors Protest

ಬಿಲ್ ಬಿಡುಗಡೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ನೂರಾರು ಗುತ್ತಿಗೆದಾರರನ್ನು ಪೊಲೀಸರು ವಶಕ್ಕೆ ಪಡೆದರು.

BBMP CONTRACTORS PROTEST
ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ (ETV Bharat)

By ETV Bharat Karnataka Team

Published : Sep 2, 2024, 7:26 PM IST

ಬೆಂಗಳೂರು: ಬಿಬಿಎಂಪಿ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂದಕುಮಾರ್ ಮತ್ತು ಬಿಬಿಎಂಪಿ ಕಾರ್ಯನಿರತ ಗುತ್ತಿದಾರರ ಸಂಘದ ಅಧ್ಯಕ್ಷ ಕೆ.ಟಿ.ಮಜುನಾಥ್ ನೇತೃತ್ವದಲ್ಲಿ ಶೇ. 25 ಬಾಕಿ ಬಿಲ್ ಬಿಡುಗಡೆಗಾಗಿ ಒತ್ತಾಯಿಸಿ ಕಾಮಗಾರಿ ಸ್ಥಗಿತಗೊಳಿಸಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನೂರಾರು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ (ETV Bharat)

ಗುತ್ತಿಗೆದಾರರು ಸಂಪೂರ್ಣ ಕಾಮಗಾರಿ ಬಿಲ್ ಮೊತ್ತವನ್ನು ಶೇ.75ರಷ್ಟು ಬಿಡುಗಡೆ ಮಾಡಿ, 25ರಷ್ಟು ಜಿಎಸ್​ಟಿ ಮತ್ತು ಶೇ.18ರಷ್ಟು ಇನ್ನಿತರ ಕಟಾವಣೆ ಮಾಡುತ್ತಿದ್ದಾರೆ. ಬಿಲ್ ಸಂಪೂರ್ಣ ಪಾವತಿಯಾಗದೇ ಇರುವ ಕಾರಣ ಗುತ್ತಿಗೆದಾರರು ಸಂಕಷ್ಟದಲ್ಲಿ ಇದ್ದಾರೆ. ಬಿಲ್ ಪಾವತಿ ವಿಳಂಬ ಆಗುತ್ತಿರುವುದರಿಂದ ಬ್ಯಾಂಕ್​ನಲ್ಲಿ ಸಾಲದ ಮೇಲೆ ಬಡ್ಡಿ ಏರಿಕೆಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಕೊಡಲೆ ಶೇ.25ರಷ್ಟು ಗುತ್ತಿಗೆದಾರರಿಗೆ ಪಾವತಿ ಮಾಡಿದರೆ ಸಂಕಷ್ಟದಿಂದ ಪಾರಾಗಬಹುದು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತರು ಗುತ್ತಿಗೆದಾರರ ಸಮಸ್ಯೆಗಳನ್ನು ಕೇಳುತ್ತಿಲ್ಲ, ಉಡಾಫೆ ಉತ್ತರ ನೀಡುತ್ತಿದ್ದಾರೆ. ಇಂದಿನಿಂದ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಮತ್ತು ಗುಂಡಿ ಮುಚ್ಚುವ ಕಾಮಗಾರಿಯನ್ನು ಯಾವ ಗುತ್ತಿಗೆದಾರರು ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ಗುತ್ತಿಗೆದಾರರ ಪ್ರತಿಭಟನೆ (ETV Bharat)

ಗುತ್ತಿಗೆದಾರರು ಪೊಲೀಸ್ ವಶಕ್ಕೆ:ಬಿಬಿಎಂಪಿ ಗುತ್ತಿಗೆದಾರಿಗೆ ಫೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ. ಇಲ್ಲಿ ಮಾಡುವಂತಿಲ್ಲ. ಅದರಿಂದ ನಿಮ್ಮನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಹೇಳಿ ನೂರಾರು ಗುತ್ತಿಗೆದಾರರನ್ನು ಈ ಸಂದರ್ಭದಲ್ಲಿ ವಶಕ್ಕೆ ಪಡೆಯಲಾಯಿತು.

ಇದನ್ನೂ ಓದಿ:ಹಾವೇರಿ ಅಪಘಾತದಲ್ಲಿ ಮೂವರು ಸಾವು ; ರಾಷ್ಟ್ರೀಯ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟಿಸಿದ ಕುಟುಂಬಸ್ಥರು - protest in front of dead body

ABOUT THE AUTHOR

...view details