ಬೆಳಗಾವಿ: "ರಾತ್ರಿ ವೇಳೆ ಮೋದಿ ಕನಸು ಕಾಣುತ್ತಾರೆ. ಆ ಕನಸು ನನಸು ಮಾಡೋಕೆ ಬಿಜೆಪಿ ಸಚಿವರು ಹೊರಡುತ್ತಾರೆ" ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, "ಒನ್ ನೇಷನ್ ಒನ್ ಎಲೆಕ್ಷನ್ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಷ್ಟ್ರದ ಆರ್ಥಿಕತೆ ಕುಸಿಯುತ್ತಿದೆ. ಅದಾನಿ ಪ್ರಕರಣದ ಬಗ್ಗೆ ಮಾತಿಗೆ ತಯಾರಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಒನ್ ನೇಷನ್ ಒನ್ ಎಲೆಕ್ಷನ್ಗೆ ತಯಾರಿ ಬೇಕು. ಸಂವಿಧಾನದಲ್ಲಿ ಕೆಲವು ಬದಲಾವಣೆ ತರಬೇಕು. ತಾಂತ್ರಿಕವಾಗಿ ಇದಕ್ಕೆ ಸಿದ್ಧರಿದ್ದಾರಾ?. ಇದೆಲ್ಲವೂ ಕೂಡ ಮಾಡಬೇಕು" ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮ ಹೇಳಿಕೆ. (ETV Bharat) "ದೇಶದ ಆರ್ಥಿಕ ಪರಿಸ್ಥಿತಿ ಕೊರತೆ ಮುಚ್ಚಿ ಹಾಕಲು ಅದಾನಿ ಹಗರಣ ಮುಚ್ಚಿಹಾಕಲು ಈ ಪ್ರಯತ್ನ ಮಾಡಲಾಗುತ್ತಿದೆ. ಈ ಸಂಬಂಧ ಪ್ರಾದೇಶಿಕ ಪಕ್ಷಗಳ ಜೊತೆ ಸಮಾಲೋಚನೆ ನಡೆಸಿದರಾ?. ಅದಾನಿ ಒಬ್ಬರನ್ನು ಉಳಿಸೋಕೆ ಇದನ್ನು ತಂದಿದ್ದಾರೆ ಎಂದು ಆರೋಪಿಸಿದರು.
ಸದನದಲ್ಲಿ ವಕ್ಫ್ ವಿಚಾರದ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, "ಬಿಜೆಪಿಯವರಿಗೆ ಇನ್ನೇನು ಮಾಡಲಿದೆ. ಸಚಿವ ಜಮೀರ್ ಸ್ಪಷ್ಟವಾಗಿ ಯಾವ ರೈತರಿಗೂ ತೊಂದರೆಯಾಗಲ್ಲ. ಯಾವ ಮಠಾಧೀಶರಿಗೂ ತೊಂದರೆಯಾಗಲ್ಲ. ಇದನ್ನು ಸಚಿವ ಜಮೀರ್ ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಸ್ಪಷ್ಟನೆ ಬೇಕು. ಸುಪ್ರೀಂ ಕೋರ್ಟ್ನಲ್ಲಿ ಯತಾಸ್ಥಿತಿ ಕಾಪಾಡುತ್ತೇವೆ ಅಂದಿದ್ಯಾರು?. ಅಲ್ಲಿ ಹಿಂಬರಹ ಕೊಟ್ಟವರು ಯಾರು?. ಬಿಜೆಪಿಯವರಲ್ಲೇ ಗೊಂದಲಗಳಿವೆ. ಬಸವಣ್ಣ ಹೆಸರೇಳಿ ರಾಜಕೀಯ ಮಾಡುತ್ತಾರೆ. ಬಸವಣ್ಣ ಬಗ್ಗೆ ಯತ್ನಾಳ್ ಲೇವಡಿ ಮಾಡಿದರು. ಅದರ ಬಗ್ಗೆ ಬಿಜೆಪಿಯವರು ಏನು ಮಾಡಿದರು?. ಯತ್ನಾಳರ ಭಯವೋ, ಆರ್ಎಸ್ಎಸ್ ಭಯವೋ ಗೊತ್ತಿಲ್ಲ. ಬಿಜೆಪಿಯಲ್ಲೇ ಎರಡಿದೆ. ಬಿಜೆಪಿ ಇದೆ ಎಜೆಪಿ ಇದೆ" ಎಂದು ಟೀಕಿಸಿದರು.
ಇದು ವಿಫಲವಾಗುತ್ತದೆ:ಒನ್ ನೇಷನ್ ಒನ್ ಎಲೆಕ್ಷನ್ ಜಾರಿ ವಿಚಾರವಾಗಿ ಮಾತನಾಡಿದ ಸಚಿವ ಸಂತೋಷ ಲಾಡ್, "ಇದು ವಿಫಲ ಆಗುತ್ತೆ ಅನ್ನೋದು ಅಭಿಪ್ರಾಯ. ಜಿಎಸ್ಟಿ, ಖೇಲೋ ಇಂಡಿಯಾ ಇದೇ ಭಾಷಣ ನೋಡಿದ್ದೇವೆ. ಇದರಿಂದ ರೈತರಿಗೆ ಅನುಕೂಲ ಆಗಲ್ಲ. ಇದರಿಂದ ಯಾರಿಗೆ ಅನುಕೂಲ ಗೊತ್ತಿಲ್ಲ. ಅವರು ತರೋದಕ್ಕೆ ನನ್ನ ಸ್ವಾಗತ. ಆದರೆ ಇದರಿಂದ ಏನು ಪ್ರಯೋಜನ ಗೊತ್ತಾಗಬೇಕು" ಎಂದರು.
ಇದನ್ನೂ ಓದಿ:ಪಂಚಮಸಾಲಿ ಹೋರಾಟಗಾರರಿಗೆ ಬಿಜೆಪಿ ಟೋಪಿ ಹಾಕಿದೆ: ಸಿಎಂ ಸಿದ್ಧರಾಮಯ್ಯ