ಚಾಮರಾಜನಗರ:ಖಾಸಗಿಬಸ್ ಕದ್ದ ಖದೀಮನೋರ್ವ ಟೋಲ್ಗೆ ಹಣ ಕಟ್ಟಲು ಪರದಾಡಿ ಕೊನೆಗೆ ಬಸ್ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.
ಚಾಮರಾಜನಗರದ ಎಲ್ಐಸಿ ಕಚೇರಿ ಬಳಿ ನಿಲ್ಲಿಸಿದ್ದ ವಜ್ರ ಎಂಬ ಖಾಸಗಿ ಬಸ್ ಅನ್ನು ಸೋಮವಾರ ತಡರಾತ್ರಿ 1ರಲ್ಲಿ ಕಳ್ಳನೊಬ್ಬ ಕದ್ದೊಯ್ದಿದ್ದ. ಬಳಿಕ, ಮಧ್ಯಾಹ್ನದ ಸುಮಾರಿಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಟೋಲ್ ಬಳಿ ಬಸ್ ಸಿಕ್ಕಿದ್ದು, ಟೋಲ್ ಕಟ್ಟಲು ಹಣ ಇಲ್ಲದೇ ಬಸ್ ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ಬಸ್ ಮಾಲೀಕ ಸೋಮನಾಯಕ ಮಾಹಿತಿ ನೀಡಿದ್ದಾರೆ.
ಕಳ್ಳತನವಾಗಿದ್ದ ಖಾಸಗಿ ಬಸ್ (ETV Bharat) ''ತಡರಾತ್ರಿ ನಮ್ಮ ಬಸ್ ಕಳ್ಳತನವಾಗಿತ್ತು. ನನಗೆ ವಿಚಾರ ತಿಳಿದ ಕೂಡಲೇ ಬಸ್ನ ಫೋಟೋವನ್ನು ಬಸ್ ಮಾಲೀಕರ ಸಂಘದ ವಾಟ್ಸ್ಆ್ಯಪ್ ಗ್ರೂಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಬೆಂಗಳೂರಿನ ಟೋಲ್ ಬಳಿ ಬಸ್ ನಿಂತಿದ್ದನ್ನು ಯಾರೋ ಗಮನಿಸಿ ನಮಗೆ ಮಾಹಿತಿ ನೀಡಿದ್ದು, ನಮ್ಮ ಬಸ್ ನಮಗೆ ಸಿಕ್ಕಿದೆ. ಖದೀಮ ಟೋಲ್ ಶುಲ್ಕ ಪಾವತಿ ಮಾಡಲು ಹಣ ಇಲ್ಲದೇ ಪರದಾಡಿದ್ದು, ಟೋಲ್ ಸಿಬ್ಬಂದಿ ಬಸ್ ಅನ್ನು ಪಕ್ಕಕ್ಕೆ ನಿಲ್ಲಿಸಿ ಹೆಚ್ಚು ವಿಚಾರಿಸುತ್ತಿದ್ದಂತೆ ಅನುಮಾನಗೊಂಡು ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಬಸ್ ಬಿಟ್ಟು ಕಳ್ಳ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಚಾಮರಾಜನಗರ ಪಟ್ಟಣ ಠಾಣೆಗೆ ದೂರು ಕೊಡುವುದಾಗಿ'' ಸೋಮನಾಯಕ ಅವರು ತಿಳಿಸಿದ್ದಾರೆ.
ಕಳ್ಳತನವಾಗಿದ್ದ ಖಾಸಗಿ ಬಸ್ (ETV Bharat) ಕಳ್ಳತನವಾಗಿದ್ದ ಬಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು ನಮಗೆ ನೆರವಾಯಿತು ಎಂದು ಇದೇ ವೇಳೆ ಅವರು ಹೇಳಿಕೊಂಡಿದ್ದಾರೆ. ಬಸ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ.
ಕಳ್ಳತನವಾಗಿದ್ದ ಖಾಸಗಿ ಬಸ್ (ETV Bharat) ಇದನ್ನೂ ಓದಿ:ಟೆಕ್ಕಿಯ ಬೈಕ್ ಕದ್ದು ಮಾರಾಟ; 2 ವರ್ಷದಿಂದ ಮಾಲೀಕನಿಗೆ ಬರುತ್ತಿವೆ ಸಂಚಾರ ನಿಯಮ ಉಲ್ಲಂಘನೆಯ ನೋಟಿಸ್! - A BIKE THEFT CASE