ಕರ್ನಾಟಕ

karnataka

ETV Bharat / state

ಮದ್ದೂರಿನಲ್ಲಿ ಕೆಂಡೋತ್ಸವದ ವೇಳೆ ಅವಘಡ: ಕೊಂಡಕ್ಕೆ ಬಿದ್ದು ಪೂಜಾರಿಗೆ ತೀವ್ರ ಗಾಯ - Kendotsava festival in Maddur

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲುಗನಹಳ್ಳಿಯಲ್ಲಿ ನಡೆದ ಕೆಂಡೋತ್ಸವದಲ್ಲಿ ಪೂಜಾರಿಯೊಬ್ಬರು ಆಯತಪ್ಪಿ ಬಿದ್ದಿದ್ದಾರೆ.

ಮದ್ದೂರಿನಲ್ಲಿ ಕೆಂಡೋತ್ಸವ
ಮದ್ದೂರಿನಲ್ಲಿ ಕೆಂಡೋತ್ಸವ

By ETV Bharat Karnataka Team

Published : Mar 22, 2024, 8:23 PM IST

ಮದ್ದೂರಿನಲ್ಲಿ ಕೆಂಡೋತ್ಸವದ ವೇಳೆ ಕೊಂಡಕ್ಕೆ ಬಿದ್ದು ಪೂಜಾರಿಗೆ ತೀವ್ರ ಗಾಯ

ಮಂಡ್ಯ : ಜಿಲ್ಲೆಯ ಮದ್ದೂರಿನಲ್ಲಿ ಕೆಂಡೋತ್ಸವದ ವೇಳೆ ಪೂಜಾರಿಯೊಬ್ಬರು ಕೆಂಡವನ್ನು ಹಾಯುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಪರಿಣಾಮ ಅವರಿಗೆ ತೀವ್ರ ಗಾಯವಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲುಗನಹಳ್ಳಿಯಲ್ಲಿ ಕೆಂಡೋತ್ಸವ ಆಯೋಜಿಸಲಾಗಿತ್ತು.

ಬಸವೇಶ್ವರ ಕೆಂಡೋತ್ಸವದ ವೇಳೆಯಲ್ಲಿ ವೀರಗಾಸೆಯ ಪೂಜಾರಿ ಕೆಂಡ ಹಾಯೋದಕ್ಕೆ ಓಡಿ ಹೋಗುತ್ತಿದ್ದರು. ಈ ವೇಳೆ ವೀರಗಾಸೆ ಪೂಜಾರಿ ಆಯತಪ್ಪಿ ಬಿದ್ದರು. ಕೂಡಲೇ ಅವರನ್ನು ಅಲ್ಲಿಂದ ಜನರು ಎತ್ತಿ, ಸಂತೈಸಿದರು. ಆದರೆ, ಬೆಂಕಿಯ ಕೆಂಡದಿಂದ ಅವರಿಗೆ ತೀವ್ರವಾದಂತಹ ಸುಟ್ಟ ಗಾಯವಾಗಿತ್ತು. ಅವರನ್ನು ಕೂಡಲೇ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಚಿಕಿತ್ಸೆ ಬಳಿಕ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇನ್ನು ವೀರಗಾಸೆ ಪೂಜಾರಿ ಕೆಂಡ ಹಾಯುವಾಗ ಬಿದ್ದ ನಂತ್ರ, ಅವರ ಹಿಂದೆಯೇ ಹಾದು ಹೋಗಬೇಕಿದ್ದಂತಹ ಮತ್ತೊಬ್ಬ ಪೂಜಾರಿ ಸ್ವಲ್ಪ ಕಾಲ ತಡಮಾಡಿ ಹಾಯೋದಕ್ಕೆ ಪ್ರಾರಂಭಿಸಿದ್ದರಿಂದ ಮುಂದಾಗಲಿದ್ದಂತಹ ಮತ್ತೊಂದು ಅವಘಡ ತಪ್ಪಿದಂತೆ ಆಗಿದೆ.

ಇದನ್ನೂ ಓದಿ :ಚಾಮರಾಜನಗರದಲ್ಲಿ ರೋಮಾಂಚಕ ಜಾತ್ರೆ: ಒಂದೂರಲ್ಲಿ ಕೆಂಡದ ನೈವೇದ್ಯ- ಮತ್ತೊಂದು ಊರಲ್ಲಿ ಮುಳ್ಳಿನ ಬೇಲಿಗೆ ಹಾರಿದ ಭಕ್ತರು

ABOUT THE AUTHOR

...view details