ಕರ್ನಾಟಕ

karnataka

ರಾಜ್ಯದ 24 ಮಂದಿ ಪೊಲೀಸ್​ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ - President Medal

By ETV Bharat Karnataka Team

Published : Aug 14, 2024, 12:02 PM IST

ರಾಜ್ಯದ 24 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಒಲಿದಿದೆ. ಇವರಲ್ಲಿ ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಘೋಷಣೆಯಾಗಿದೆ.

president medal
ರಾಷ್ಟ್ರಪತಿಗಳ ಪದಕ (ETV Bharat)

ಬೆಂಗಳೂರು:78ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಶ್ಲಾಘನೀಯ ಸೇವಾ ಪದಕ ಪ್ರಶಸ್ತಿಗಳನ್ನು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ. ರಾಜ್ಯದ ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಸೇರಿದಂತೆ ಪೊಲೀಸ್, ಗೃಹರಕ್ಷಕ, ಸೇರಿದಂತೆ ಒಟ್ಟು 24 ಜನ ಅಧಿಕಾರಿ, ಸಿಬ್ಬಂದಿಯು ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ:

ಎಂ. ಚಂದ್ರಶೇಖರ್ - ಎಡಿಜಿಪಿ

ಬಸವಲಿಂಗಪ್ಪ ಕೆ.ಬಿ. - ಸೀನಿಯರ್ ಕಮಾಂಡರ್, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ

ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ:

ಶ್ರೀನಾಥ್ ಮಹಾದೇವ್ ಜೋಶಿ - ಎಸ್​​​ಪಿ

ಸಿ.ಕೆ. ಬಾಬಾ - ಡಿಸಿಪಿ

ರಾಮಗೊಂಡ ಭೈರಪ್ಪ ಬಸರ್ಗಿ - ಎಎಸ್‌ಪಿ

ಗಿರಿ ಕೃಷ್ಣಮೂರ್ತಿ ಸಿ. - ಡಿಎಸ್‌ಪಿ

ಪಿ. ಮುರುಳೀಧರ್ - ಡಿಎಸ್‌ಪಿ

ಬಸವೇಶ್ವರ - ಅಸಿಸ್ಟೆಂಟ್ ಡೈರೆಕ್ಟರ್

ಬಸವರಾಜ್ ಕಮ್ತಾನೆ - ಡಿಎಸ್‌ಪಿ

ಮಹೇಶ್ ಎನ್. - ಅಸಿಸ್ಟೆಂಟ್ ಡೈರೆಕ್ಟರ್

ರವೀಶ್ ಎಸ್. ನಾಯಕ್ - ಎಸಿಪಿ

ಶರತ್ ದಾಸಣ್ಣ ಗೌಡ ಮಲ್ಗಾರ್ - ಎಸ್​​ಪಿ

ಪ್ರಭಾಕರ್ ಗೋವಿಂದಪ್ಪ - ಎಸಿಪಿ‌

ಗೋಪಾಲರೆಡ್ಡಿ ವಿ.ಸಿ. - ಡಿಸಿಪಿ

ಬಿ. ವಿಜಯ್ ಕುಮಾರ್ - ಹೆಡ್ ಕಾನ್ಸ್‌ಟೇಬಲ್

ಮಂಜುನಾಥ ಶೇಕಪ್ಪ ಕಲ್ಲೇದೇವರ್ - ಸಬ್ ಇನ್ಸ್‌ಪೆಕ್ಟರ್

ಹರೀಶ್ ಹೆಚ್.ಆರ್. - ಅಸಿಸ್ಟೆಂಟ್ ಕಮಾಂಡೆಂಟ್

ಎಸ್. ಮಂಜುನಾಥ್ - ಇನ್ಸ್‌ಪೆಕ್ಟರ್

ಮಹಿಬೂಬ್ ಸಾಹೇಬ್ ನೂರ್ ಅಹಮದ್ ಮುಜಾವರ್ - ಹೆಡ್ ಕಾನ್ಸ್‌ಟೇಬಲ್

ಗೌರಮ್ಮ ಜಿ. - ಎಎಸ್ಐ

ಗೃಹ ರಕ್ಷಕದಳ ಮತ್ತು ನಾಗರಿಕ ರಕ್ಷಣೆ:

ವಿಜಯ್ ಕುಮಾರ್ ಎನ್. - ಕಂಪನಿ ಕಮಾಂಡರ್

ರೇವಣ್ಣಪ್ಪ ಬಿ. - ಪ್ಲಟೂನ್ ಕಮಾಂಡರ್

ಸತೀಶ್ ಯಲ್ಲನ್ಸ​ ಇರಕಲ್ - ಸ್ಟಾಫ್ ಆಫೀಸರ್

ಮುರಳಿ ಮೋಹನ್ ಚೂಂತರು - ಕಮಾಂಡೆಂಟ್

ಇದನ್ನೂ ಓದಿ:78ನೇ ಸ್ವಾತಂತ್ರ್ಯೋತ್ಸವಕ್ಕೆ ಭರದ ಸಿದ್ಧತೆ; ಮಾಣಿಕ್ ಶಾ ಪರೇಡ್ ಮೈದಾನದ ಸುತ್ತಮುತ್ತ ಬಿಗಿ ಬಂದೋಬಸ್ತ್, ಸಂಚಾರ ಬದಲು - Manik Shah Parade Ground

ABOUT THE AUTHOR

...view details