ಕರ್ನಾಟಕ

karnataka

ETV Bharat / state

ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾತ್ರ ಇಲ್ಲ: ದೂರುದಾರೆ ಸುನೀತಾ ಚೌಹಾಣ್

ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾತ್ರ ಇಲ್ಲ ಎಂದು ದೂರುದಾರೆ ಸುನೀತಾ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.

By ETV Bharat Karnataka Team

Published : 5 hours ago

ಸುನೀತಾ ಚೌಹಾಣ್
ಸುನೀತಾ ಚೌಹಾಣ್ (ETV Bharat)

ಹುಬ್ಬಳ್ಳಿ:"ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರ ಪಾತ್ರವಿಲ್ಲ" ಎಂದು ದೂರುದಾರೆ ಸುನೀತಾ ಚೌಹಾಣ್ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಸಹೋದರ ಗೋಪಾಲ್​ ಜೋಶಿ ಬಂಧನದ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಮ್ಮ ಪಕ್ಷದಿಂದ ಟಿಕೆಟ್ ಸಿಗುವ ಸಾಧ್ಯತೆ ಇತ್ತು. ಬಿಜೆಪಿಯಿಂದ ಟಿಕೆಟ್ ಕೊಡಿಸುತ್ತೇನೆ ಅಂದ್ರು. ಟಿಕೆಟ್ ಕೊಡಿಸೋದಾಗಿ 2 ಕೋಟಿ ರೂ. ಬೇಡಿಕೆ ಇಟ್ಟು, 25 ಲಕ್ಷ ಹಣ ಪಡೆದಿದ್ದರು. ಕೊಟ್ಟ ಹಣ ವಾಪಸ್ ಮಾಡಿರಲಿಲ್ಲ. ಹೀಗಾಗಿ ನಾವು ದೂರು ಕೊಟ್ಟಿದ್ದೇವೆ" ಎಂದರು.

ದೂರುದಾರೆ ಸುನೀತಾ ಚೌಹಾಣ್ (ETV Bharat)

"ಗೋಪಾಲ್​ ಜೋಶಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಮತ್ತು ಹೈಕಮಾಂಡ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಕೇಂದ್ರ ಸಚಿವರ ಪಾತ್ರ ಇಲ್ಲ. ನಾನು ಹೈಕಮಾಂಡ್ ನಾಯಕರನ್ನು ಭೇಟಿ ಆಗಿಲ್ಲ. ನೇರವಾಗಿ ಗೋಪಾಲ್​ ಜೋಶಿ ಅವರಿಗೆ ದುಡ್ಡು ಕೊಟ್ಟಿದ್ದೇನೆ" ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ವಂಚನೆ ಆರೋಪ: ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅಣ್ಣ ಅರೆಸ್ಟ್​, ಹುಬ್ಬಳ್ಳಿಗೆ ಕರೆತಂದು ಪರಿಶೀಲನೆ

ABOUT THE AUTHOR

...view details