ಬೆಂಗಳೂರು: ನಗರದಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ ಆಗಸ್ಟ್ 20 ಹಾಗೂ 21ರಂದು ಬೆಳಗ್ಗೆೆ 10 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಆಗಸ್ಟ್ 20ರಂದು ನಗರದ 66/11ಕೆವಿ ಅಂಜನಾಪುರದ ಕೆಎಸ್ಐಟಿ ಕಾಲೇಜು, ಅಂಜನಾಪುರ 8ನೇ ಬ್ಲಾಕ್, ವೀವರ್ಸ್ ಕಾಲೊನಿ, ಪೂರ್ವಂಕರ ಅಪಾರ್ಟ್ಮೆಂಟ್, ಅಮೃತನಗರ, ಎಸ್.ಪಿ ತೋಟ ವಡ್ಡರಪಾಳ್ಯ ಕೆಂಬತ್ತಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಆಗಸ್ಟ್ 21ರಂದು 220/66/11ಕೆವಿ ಎಚ್ಎಸ್ಆರ್ ಲೇಔಟ್, ಬೊಮ್ಮನಹಳ್ಳಿ, ,ಕೂಡ್ಲು, ಜಕ್ಕಸಂದ್ರ, ಕೈಕೊಂಡನಹಳ್ಳಿ, ಸೋಮಸುಂದರಪಾಳ್ಯ, ಹೊಸಪಾಳ್ಯ, ಕೋರಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದಿದೆ.