ಧಾರವಾಡ: ಹುಬ್ಬಳ್ಳಿ - ಧಾರವಾಡ ಅವಳಿ ನಗರದ ರಸ್ತೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ಪಾಲಿಕೆ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 82 ವಾರ್ಡ್ಗಳಿದ್ದು, ಎಲ್ಲೆಂದರಲ್ಲಿ ಗುಂಡಿಗಳು ಬಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.
ಹುಬ್ಬಳ್ಳಿ ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ ತೆಗ್ಗುಗುಂಡಿಗಳು (ETV Bharat) ಹುಬ್ಬಳ್ಳಿ ಹಾಗೂ ಧಾರವಾಡ ನಗರದಲ್ಲಿ ಸದ್ಯ 13 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ವಾಸಿಸುತ್ತಿದೆ. ಆದರೆ, ನಗರದಲ್ಲಿ ತೆಗ್ಗು ಗುಂಡಿಗಳ ಸಂಖ್ಯೆಯೇ ಹೆಚ್ಚಾಗಿದೆ. ಧಾರವಾಡ ನಗರದ ಬಹುತೇಕ ಕಡೆ ರಸ್ತೆ ಕೆಟ್ಟು ಹೋಗಿವೆ. ಇದರಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆಗಳೂ ಇದ್ದು, ನಗರದ ಉದಯ ಹಾಸ್ಟೆಲ್, ಮುರುಘಾಮಠ, ಕಮಲಾಪೂರ ಸೇರಿದಂತೆ ಹಲವು ಕಡೆ ಮಳೆಯಿಂದ ಗುಂಡಿಗಳು ಬಿದ್ದಿವೆ.
ಈ ಕುರಿತು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, "ಮಳೆಯಿಂದ ಮತ್ತು ಇನ್ನಿತರ ಸಮಸ್ಯೆಯಿಂದ ಹಾಳಾದ ರಸ್ತೆಯ ಎಸ್ಟಿಮೇಟ್ ಮಾಡಿದ್ದೇವೆ. ಗುಂಡಿ ಮುಚ್ಚುವುದಕ್ಕೆ 1 ಕೋಟಿ 59 ಲಕ್ಷ ಬೇಕು" ಎಂದು ಹೇಳಿದರು.
ಮತ್ತೊಂದು ಕಡೆ ಪಾಲಿಕೆ ಮೇಯರ್ ರಾಮಣ್ಣ, "ವಲಯವಾರು ಟೆಂಡರ್ ಮಾಡಿದ್ದೇವೆ. ಮಳೆ ಕಡಿಮೆಯಾದ ಮೇಲೆ ಕೆಲಸ ಆರಂಭವಾಗುತ್ತದೆ. ಈಗ ಕೆಲಸ ಮಾಡಿದರೆ ಡಾಂಬರೀಕರಣ ಹಾಗೂ ಸಿಮೆಂಟ್ ಹಾಕಲು ಆಗಲ್ಲ. ಹುಬ್ಬಳ್ಳಿ - ಧಾರವಾಡ ನಗರ ಎರಡೂ ಕಡೆ ಗುಂಡಿಗಳನ್ನು ಮುಚ್ಚುತ್ತೇವೆ. ಸದ್ಯ ಆಗಾಗ ಮಳೆ ಬರುತ್ತಿರುವುದರಿಂದ ಮತ್ತಷ್ಟು ರಸ್ತೆ ಹಾಳಾಗುತ್ತಿವೆ. ಹೀಗಾಗಿ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ." ಎಂದರು.
ಇದನ್ನೂ ಓದಿ:ವಾಯವ್ಯ ಸಾರಿಗೆಯ 100 ಬಸ್ ದುರಸ್ತಿ: ಹೊಸ ಲುಕ್ನಲ್ಲಿ ಪ್ರಯಾಣಿಕರ ಸೇವೆಗೆ ಸಜ್ಜು - NWKRTC Bus