ಕರ್ನಾಟಕ

karnataka

ETV Bharat / state

ಹಾವೇರಿ: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಹೂತಿದ್ದ ಶವ ಹೊರತೆಗೆಯಲು ಮುಂದಾದ ಪೊಲೀಸರು - Haveri Student Suicide Case - HAVERI STUDENT SUICIDE CASE

ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದಲ್ಲಿ ಅಂತ್ಯಸಂಸ್ಕಾರ ಮಾಡಿದ್ದ ಮೃತದೇಹವನ್ನು ಮತ್ತೆ ಹೊರತೆಗೆದು ತನಿಖೆ ನಡೆಸಲಾಗುತ್ತಿದೆ.

student suicide case
ವಿದ್ಯಾರ್ಥಿನಿಯ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಪೊಲೀಸರು (ETV Bharat)

By ETV Bharat Karnataka Team

Published : Jul 12, 2024, 12:20 PM IST

ಹಾವೇರಿ:ಶಿಕ್ಷಕರೊಬ್ಬರ ಕುಟುಂಬದ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸಂಬಂಧ ಅಂತ್ಯಸಂಸ್ಕಾರ ಮಾಡಿದ್ದ ಮೃತದೇಹವನ್ನು ಮರಳಿ ಹೊರತೆಗೆಯಲಾಗುತ್ತಿದೆ. ಜಿಲ್ಲೆಯ ಹಿರೇಕೆರೂರು ತಾಲೂಕಿನ ಆಲದಕಟ್ಟೆ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ದೂದಿಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡವಳು. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಶಿಕ್ಷಕರೊಬ್ಬರ ಪತ್ನಿಯು ಕಿರುಕುಳ ನೀಡಿರುವ ಬಗ್ಗೆ ತಿಳಿಸಿದ್ದಳು. ತದನಂತರ ಪೋಷಕರು ಮೃತ ಮಗಳ ಅಂತ್ಯಕ್ರಿಯೆ ನೆರವೇರಿಸಿದ್ದರು.

ಬಳಿಕ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೀಗ, ಹೂಳಲಾಗಿದ್ದ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮರಳಿ ಹೊರತೆಗೆಯಲಾಗುತ್ತಿದೆ.

ಇದನ್ನೂ ಓದಿ:ತುಮಕೂರು: ಲಂಬಾಣಿ ತಾಂಡಾದಲ್ಲಿ ದಂಪತಿ ಆತ್ಮಹತ್ಯೆ - Couple Committed Suicide

ABOUT THE AUTHOR

...view details