ಕರ್ನಾಟಕ

karnataka

ETV Bharat / state

ರೇಣುಕಾಸ್ವಾಮಿ ಕೊಲೆ ಆರೋಪಿಗಳ ಶಿಫ್ಟ್​ಗೂ ಮುನ್ನ ಶಿವಮೊಗ್ಗ ಜೈಲಿನಲ್ಲಿ ಪೊಲೀಸರಿಂದ ಪರಿಶೀಲನೆ - Police raid on Central Jail

ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳು ಇಂದು ಶಿವಮೊಗ್ಗ ಸೆಂಟ್ರಲ್​ ಜೈಲ್​ಗೆ ಶಿಫ್ಟ್​ ಆಗಲಿದ್ದಾರೆ. ಅದಕ್ಕೂ ಮೊದಲು ಎಸ್ಪಿ ಮಿಥುನ್​ ಕುಮಾರ್​ ನೇತೃತ್ವದಲ್ಲಿ ಜೈಲಿನ​ ಮೇಲೆ ರೇಡ್​ ಮಾಡಲಾಗಿದೆ.

ಎಸ್ಪಿ ಮಿಥುನ್ ಕುಮಾರ್
ಎಸ್ಪಿ ಮಿಥುನ್ ಕುಮಾರ್, ಇತರ ಪೊಲೀಸರು (ETV Bharat)

By ETV Bharat Karnataka Team

Published : Aug 28, 2024, 10:58 AM IST

ಶಿವಮೊಗ್ಗ:ಶಿವಮೊಗ್ಗದ ಕೇಂದ್ರ ಕಾರಾಗೃಹದ ಮೇಲೆ ಎಸ್ಪಿ ನೇತೃತ್ವದ ತಂಡ ದಿಢೀರ್​ ದಾಳಿ ನಡೆಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ಶಿವಮೊಗ್ಗ ಜೈಲಿಗೆ ಶಿಫ್ಟ್​ ಆಗುವ ಮುನ್ನವೇ ಸೆಂಟ್ರಲ್ ಜೈಲ್​ ಮೇಲೆ ಎಸ್ಪಿ ಮಿಥುನ್​ ಕುಮಾರ್​ ನೇತೃತ್ವದಲ್ಲಿ ಏಕಾಏಕಿ ದಾಳಿ ನಡೆಸಲಾಗಿದೆ.

ಪೊಲೀಸರ ದಾಳಿ (ETV Bharat)

ಬೆಳಗ್ಗೆ 5 ಗಂಟೆಗೆ ದಾಳಿ ನಡೆಸಲಾಗಿದ್ದು, ಸುಮಾರು 5 ಗಂಟೆಗಳ ಕಾಲ ಜೈಲಿನ ಪ್ರತಿ ಬ್ಯಾರಕ್ ಸೇರಿದಂತೆ ಎಲ್ಲಾ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಜೈಲ್​ನಲ್ಲಿ ನಿಷೇಧಿತ ವಸ್ತುಗಳಾದ ಗಾಂಜಾ, ತಂಬಾಕು ಸೇರಿದಂತೆ ಮೊಬೈಲ್​ ಇರುವ ಕುರಿತು ತಲಾಷ್ ಮಾಡಲಾಗಿದೆ. ಆದರೆ, ಸದ್ಯದ ಮಾಹಿತಿಯ ಪ್ರಕಾರ ದಾಳಿಯ ವೇಳೆ ಯಾವುದೇ ವಸ್ತುಗಳು ಲಭ್ಯವಾಗಿಲ್ಲ. ಆರೋಪಿಗಳಾದ ಜಗದೀಶ್ ಹಾಗೂ ಲಕ್ಷ್ಮಣ ಇಂದು ಮಧ್ಯಾಹ್ನ ಜೈಲಿಗೆ ಆಗಮಿಸುವ ನಿರೀಕ್ಷೆ ಇದೆ.

ಪೊಲೀಸರ ದಾಳಿ (ETV Bharat)

ಇನ್ನು ಈ ದಾಳಿಯನ್ನು ಕಳೆದ ವಾರ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್​ ಅವರ ದ್ವಿತೀಯ ಪುತ್ರ ಬಸವೇಶ್ ಅವರ ಮೇಲೆ ನಡೆದ ಕೊಲೆ ಯತ್ನದ ಹಿನ್ನಲೆಯಲ್ಲಿ ದಾಳಿ‌ ನಡೆಸಿರಬಹುದಾಗಿದೆ ಎನ್ನಲಾಗುತ್ತಿದೆ. ಬಸವೇಶ್ ಕೊಲೆಗೆ ಜೈಲ್​ನಿಂದ ಸುಫಾರಿ ನೀಡಲಾಗಿತ್ತು ಎಂದು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ:ಬಳ್ಳಾರಿ ಸೆಂಟ್ರಲ್​ ಜೈಲಿಗೆ ದರ್ಶನ್​ ಶಿಫ್ಟ್​; ಈ ಪುರಾತನ ಕಾರಾಗೃಹಕ್ಕಿದೆ ಸ್ವಾತಂತ್ರ್ಯದ ಇತಿಹಾಸ! - Bellary Central Jail History

ABOUT THE AUTHOR

...view details