ಕರ್ನಾಟಕ

karnataka

ETV Bharat / state

ರೇಣುಕಾಸ್ವಾಮಿ ಕೊಲೆ ಕೇಸ್: 17 ಆರೋಪಿಗಳ ಪ್ರೊಫೈಲ್ ತಯಾರಿಗೆ ಸಿದ್ಧತೆ - Renukaswamy Murder Case - RENUKASWAMY MURDER CASE

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಸಂಬಂಧ ನಟ ದರ್ಶನ್ ಸೇರಿ 17 ಆರೋಪಿಗಳ ಪ್ರೊಫೈಲ್ ಸಿದ್ಧಪಡಿಸಲು ಪೊಲೀಸರು ಮುಂದಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್
ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ (ETV Bharat)

By ETV Bharat Karnataka Team

Published : Aug 16, 2024, 8:07 PM IST

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮಘಟ್ಟ ತಲುಪಿದ್ದು, ಪೊಲೀಸರು ಇದೀಗ ನಟ ದರ್ಶನ್ ಸೇರಿ 17 ಆರೋಪಿಗಳ ಪ್ರೊಫೈಲ್ ಸಿದ್ಧಪಡಿಸಲು ಮುಂದಾಗಿದ್ದಾರೆ.

ಪೊಲೀಸರು ತಯಾರು ಮಾಡುತ್ತಿರುವ ಪ್ರೊಫೈಲ್​ನಲ್ಲಿ ಆರೋಪಿಗಳ ಸಂಪೂರ್ಣ ಮಾಹಿತಿ ಇರಲಿದೆಯಂತೆ‌. ಆರೋಪಿಗಳು ಹುಟ್ಟಿದ್ದು ಯಾವಾಗ, ಆದಾಯ ಎಷ್ಟು, ಯಾವ ಕೆಲಸ ಮಾಡ್ತಿದ್ದಾರೆ, ಯಾವ ವಿಳಾಸದಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ಪ್ರತ್ಯೇಕ ಪ್ರೊಫೈಲ್‌ನಲ್ಲಿರಲಿದೆ. ಅಲ್ಲದೆ ಆರೋಪಿಗಳ ಮೇಲಿರುವ ಪ್ರಕರಣಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದರಲ್ಲಿ ದರ್ಶನ್ ಮೇಲೆ ದಾಖಲಾಗಿರುವ ಎಲ್ಲಾ ಕೇಸ್​ಗಳನ್ನು ಕೂಡ ಸೇರಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ಹೈದರಾಬಾದ್​ಗೆ ಕಳಿಸಲಾಗಿದ್ದ ಕೆಲವು ವರದಿಗಳು ಬರಬೇಕಿದ್ದು, ನಂತರ ಚಾರ್ಜ್​ಶೀಟ್ ಸಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ದಯಾನಂದ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:'ಡಿಜಿಟಲ್‌ ಅರೆಸ್ಟ್‌' ಮಾಡಿ ₹2.21 ಕೋಟಿ ವಂಚನೆ, ಐವರ ಬಂಧನ: ಏನಿದು ಕಳ್ಳರ ಹೊಸ ಕಸುಬು? - Digital Arrest Fraud

ABOUT THE AUTHOR

...view details