ಮೈಸೂರು:ಮಿಂಚಿನ ಕಾರ್ಯಾಚರಣೆ ನಡೆಸಿದ ವಿಜಯನಗರ ಠಾಣೆ ಪೊಲೀಸರು, ಪ್ರಕರಣ ದಾಖಲಾದ ಕೇವಲ 4 ಗಂಟೆಯಲ್ಲಿ ಮಗುವನ್ನು ಅಪಹರಿಸಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೂಟಗಳ್ಳಿಯ ದೊಡ್ಡ ಅರಳೀಮರದ ಮಂಜುನಾಥ, ಇಲವಾಲ ಹೋಬಳಿಯ ನಾಗವಾಲದ ಇಂದ್ರಕುಮಾರ್, ಪಾಂಡವಪುರ ತಾಲೂಕಿನ ಡಾಬರಹಳ್ಳಿಯ ಕುಮಾರ್, ಇಲವಾಲ ಹೋಬಳಿಯ ನಾಗವಾಲದ ಸುಪ್ರಿಯಾ ಹಾಗೂ ವಿಜಯಲಕ್ಷ್ಮೀ ಬಂಧಿತರು.
ಮೈಸೂರಿನ ಹಿನಕಲ್ ವರ್ತುಲ ರಸ್ತೆಯ ಜೋಪಡಿಯಲ್ಲಿ ಬುಧವಾರ ಬೆಳಗ್ಗೆ 3ಕ್ಕೆ ಬಿಹಾರದ ಅಲೆಮಾರಿ ಸಮುದಾಯದ ಎಲ್ಲರೂ ಮಲಗಿರುವ ಸಂದರ್ಭ 40 ದಿನದ ಗಂಡು ಮಗುವನ್ನು ಆರೋಪಿಗಳು ಅಪಹರಿಸಿದ್ದರು. ಈ ಕುರಿತು ಮಗುವಿನ ತಾಯಿ ರಾಮಡಲ್ಲಿ ದೇವಿ ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ.