ಕರ್ನಾಟಕ

karnataka

ETV Bharat / state

ಬೆಟ್ಟದಿಂದ ಜಾರಿದ ಬಂಡೆ : ಪೈಪ್​​ಲೈನ್​ಗೆ ಹಾನಿ, ನೀರಿನ ಸಮಸ್ಯೆ ಹೆಚ್ಚಳ - Pipeline Damaged - PIPELINE DAMAGED

ಕೊಪ್ಪಳ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಬೆಟ್ಟದಿಂದ ಬೃಹತ್ ಕಲ್ಲುಬಂಡೆ ಜಾರಿಬಿದ್ದು ಪೈಪ್​ಲೈನ್ ಹಾನಿಯಾಗಿದೆ. ಇದರಿಂದಾಗಿ ಗ್ರಾಮದಲ್ಲಿ ನೀರಿನ ಕೊರತೆ ಉಂಟಾಗಿದೆ.

pipeline-damaged
ಪೈಪ್​​ಲೈನ್​ಗೆ ಹಾನಿ (ETV Bharat)

By ETV Bharat Karnataka Team

Published : Aug 21, 2024, 7:33 PM IST

ಗಂಗಾವತಿ(ಕೊಪ್ಪಳ):ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಬೆಟ್ಟದಿಂದ ಬೃಹತ್ ಕಲ್ಲುಬಂಡೆ ಜಾರಿಬಿದ್ದು ಪೈಪ್​ಲೈನ್​ ಡ್ಯಾಮೇಜ್ ಆಗಿದೆ. ಇದರಿಂದಾಗಿ ಗ್ರಾಮದ 2ನೇ ವಾರ್ಡ್​ನ ಸುಮಾರು 80ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಬೃಹತ್ ಕಲ್ಲುಬಂಡೆ ಜಾರಿಬಿದ್ದು ಪೈಪ್​ಲೈನ್​​ಗೆ ಹಾನಿ (ETV Bharat)

ಗ್ರಾಮದ 2ನೇ ವಾರ್ಡ್​ನ ಗದ್ವಾಲ್ ಕ್ಯಾಂಪಿನ ಸಮೀಪ ಇರುವ ಬೆಟ್ಟದಿಂದ ಬೃಹತ್ ಕಲ್ಲು ಬಂಡೆಯೊಂದು ಉರುಳಿ ಬಂದು ಕುಡಿಯುವ ನೀರಿನ ಉದ್ದೇಶಕ್ಕೆ ಹಾಕಿದ್ದ ಪೈಪ್​​ಲೈನ್​ಗೆ ತಗುಲಿ ನಿಂತಿತ್ತು. ಇದರಿಂದ ಭಾರೀ ಪ್ರಮಾಣದ ಅನಾಹುತ ತಪ್ಪಿತ್ತು. ಆದರೆ ಈ ಕಲ್ಲು ಬಂಡೆ ಉರುಳಿಕೊಂಡು ಬಂದಿರುವ ರಭಸಕ್ಕೆ ಕುಡಿಯುವ ನೀರಿನ ಪೈಪ್​​ಗೆ ಬಡಿದಿದ್ದರಿಂದ ಡ್ಯಾಮೇಜ್ ಆಗಿದೆ. ಪರಿಣಾಮ, ಪೈಪ್​ಲೈನ್​ ಕಿತ್ತು ಹೋಗಿದೆ. ಈಗ ವಾರ್ಡ್​ನ ಸುಮಾರು 80ಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ.

ಪೈಪ್​ಲೈನ್​ಗೆ ಹಾನಿಯಾಗಿರುವುದು (ETV Bharat)

ಪೈಪ್​ಲೈನ್​ ದುರಸ್ತಿಗೆ ಎರಡು ದಿನ ಹಿಡಿಯಲಿದೆ. ಈಗಾಗಲೇ ಪಂಚಾಯಿತಿಯ ಪಿಡಿಒ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತ್ವರಿತಗತಿಯಲ್ಲಿ ಪೈಪ್​​ಲೈನ್​ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪೈಪ್​​ಲೈನ್​ಗೆ ಹಾನಿ (ETV Bharat)

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಲೋಕೇಶ್ ರಾಠೋಡ್, "ಸದ್ಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಟ್ಯಾಂಕರ್ ಮೂಲಕ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಎರಡು ದಿನದಲ್ಲಿ ಪೈಪ್​ಲೈನ್​ ದುರಸ್ತಿ ಮುಗಿಸಿದ ಬಳಿಕ ಎಂದಿನಂತೆ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಜಿಲ್ಲೆಯಲ್ಲಿ 200 ಕೆರೆಗಳು ಖಾಲಿ, ಖಾಲಿ; ಬಿರುಕು ಬಿಟ್ಟ ನೆಲ, ಒಣಗುತ್ತಿರುವ ಬೆಳೆಗಳು - WATER SCARCITY

ABOUT THE AUTHOR

...view details