ಮಂಗಳೂರು:''ಸಿದ್ದರಾಮಯ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ ಎಲ್ಲಾ ಗ್ಯಾರಂಟಿಗಳು ವಿಫಲವಾಗಿದೆ. ಮೋದಿ ಅವರ ಗ್ಯಾರಂಟಿ ಬಗ್ಗೆ ಮಾತ್ರ ಜನರಿಗೆ ವಿಶ್ವಾಸ ಇದೆ'' ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಜಿ.ಫಡ್ನವಿಸ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ''ಮೋದಿ ಅವರ ಗ್ಯಾರಂಟಿಯು ಗ್ಯಾರಂಟಿಗೆ ಗ್ಯಾರಂಟಿ ಎಂಬುದು ಜನರಿಗೆ ಗೊತ್ತಿದೆ. ಈ ಕಾರಣದಿಂದ ಕರ್ನಾಟಕದಿಂದ ಅಭೂತಪೂರ್ವ ವಿಜಯ ಸಿಗಲಿದೆ'' ಎಂದರು.
ಭಾರತಕ್ಕಾಗಿ ಮತ ಹಾಕಿ: ಬಳಿಕ ಮಂಗಳೂರಿನಲ್ಲಿ ಆಯೋಜಿಸಲಾದ ಬಿಜೆಪಿ ಬೂತ್ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ''ಈ ಬಾರಿಯ ಚುನಾವಣೆಗೆ ಬಿಜೆಪಿಗಾಗಿ ಮತ ಅಲ್ಲ. ಭಾರತಕ್ಕಾಗಿ ಮತ ಹಾಕಿ. ಬಿಜೆಪಿಗಾಗಿ ಕೆಲಸ ಮಾಡುತ್ತಿಲ್ಲ. ಭಾರತಕ್ಕಾಗಿ ಕೆಲಸ ಮಾಡುತ್ತೇನೆಂದು ಕೆಲಸ ಮಾಡಿ. ಈ ಮೂಲಕ ಪ್ರಗತಿಶೀಲ, ಉತ್ತಮ ಭಾರತ ಹಾಗೂ ಕರ್ನಾಟಕ ಕಟ್ಟಲು ಶ್ರಮವಹಿಸಿ'' ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.