ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ಸಂಸದ ಪ್ರಜ್ವಲ್ ರೇವಣ್ಣನನ್ನು ಜೂ.6ವರೆಗೂ ಪೊಲೀಸ್ ವಶಕ್ಕೆ ಪಡೆದುಕೊಂಡಿರುವ ಎಸ್ಐಟಿ ಅಧಿಕಾರಿಗಳು ತಮ್ಮ ಅಸಲಿ ವಿಚಾರಣೆ ಆರಂಭಿಸಲಿದ್ದಾರೆ. ಪೊಲೀಸ್ ಕಸ್ಟಡಿಗೆ ಅನುಮತಿ ದೊರೆತ ಬಳಿಕ ಅಧಿಕಾರಿಗಳು ನೇರವಾಗಿ ಸಿಐಡಿ ಪ್ರಧಾನ ಕಚೇರಿಗೆ ಕರೆ ತಂದರು. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ನನ್ನು ವಿಚಾರಣೆಗೊಳಪಡಿಸಲಿದ್ದಾರೆ.
ಕಸ್ಟಡಿಗೆ ಪಡೆದ ನಂತರ ಎಸ್ಐಟಿ ವಿಚಾರಣೆ ಹೇಗೆ?ಪ್ರಜ್ವಲ್ನನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಎಸ್ಐಟಿ ಅಧಿಕಾರಿಗಳ ತಂಡ ಪ್ರಶ್ನೆಗಳ ಬಾಣ ಬೀಡಲಿದ್ದಾರೆ. ಹೊಳೆ ನರಸೀಪುರದಲ್ಲಿರುವ ಜೆಡಿಎಸ್ ಶಾಸಕ ರೇವಣ್ಣ ಮನೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಂತ್ರಸ್ತ ಮಹಿಳೆಯರಿಗೂ ನಿಮಗೂ ಯಾವಾಗಿನಿಂದ ಪರಿಚಯವಿತ್ತು? ಇಬ್ಬರ ನಡುವೆ ಸಂಬಂಧ ಹೇಗೆ ಆಯ್ತು? ನಿಮ್ಮ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದ್ದು, ಈ ಬಗ್ಗೆ ಏನು ಹೇಳುವಿರಿ? ದೌರ್ಜನ್ಯ ವಿಡಿಯೋ ಚಿತ್ರೀಕರಣ ಯಾಕೆ ಮಾಡಿದ್ರಿ? ಬೆದರಿಕೆ ಹಾಕುವ ಉದ್ದೇಶವಿತ್ತಾ? ಎಂಬ ಹಲವು ಪ್ರಶ್ನೆಗಳನ್ನು ಅಧಿಕಾರಿಗಳು ಲಭ್ಯವಾಗಿರುವ ಸಾಕ್ಷಿಗಳನ್ನ ಮುಂದಿಟ್ಟು ವಿಚಾರಣೆ ನಡೆಸಲಿದ್ದಾರೆ.