ಕರ್ನಾಟಕ

karnataka

ETV Bharat / state

ಮಹಿಳೆಯರೇ ಎಳೆಯುವ ಪಾರ್ವತಿದೇವಿ ರಥ: ಹಾವೇರಿಯ ಮಂತ್ರೋಡಿ ಕ್ಷೇತ್ರದಲ್ಲಿ ನಾರಿಶಕ್ತಿ - GODDESS CHARIOT PULLED BY WOMEN

ಹಾವೇರಿಯ ಸವಣೂರಿನಲ್ಲಿ ಪ್ರತೀವರ್ಷ ರೇವಣಸಿದ್ದೇಶ್ವರ ಶ್ರೀಗಳ ಜಾತ್ರಾ ಮಹೋತ್ಸವ ವೈಭವದಿಂದ ನಡೆಯುತ್ತದೆ. ಇಲ್ಲಿ ಪಾರ್ವತಿಯ ರಥೋತ್ಸವವನ್ನು ಮಹಿಳೆಯರೇ ನೆರವೇರಿಸುತ್ತಾರೆ.

HAVERI  REVANASIDDHESHWARA SRI FAIR  ಮಂತ್ರೋಡಿ ಕ್ಷೇತ್ರ  FAIR FOR WOMEN
ಗುರುವಾರ ಮಹಿಳೆಯರಿಂದ ನಡೆದ ಪಾರ್ವತಿದೇವಿ ರಥೋತ್ಸವ (ETV Bharat)

By ETV Bharat Karnataka Team

Published : Jan 31, 2025, 1:29 PM IST

ಹಾವೇರಿ:ಇಂದು ಮಹಿಳೆ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನ ಸಾಧನೆ ತೋರುತ್ತಿದ್ದಾಳೆ. ಪುರುಷರಿಗೇ ಮೀಸಲಾಗಿರುವ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಸೈ ಎನಿಸಿಕೊಂಡಿದ್ದಾರೆ. ಇದಕ್ಕೊಂದು ಹೊಸ ನಿದರ್ಶನ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಂತ್ರೋಡಿ ಕ್ಷೇತ್ರ.

ಮಹಿಳೆಯರೇ ಎಳೆಯುವ ಪಾರ್ವತಿದೇವಿ ರಥ: ಹಾವೇರಿಯ ಮಂತ್ರೋಡಿ ಕ್ಷೇತ್ರದಲ್ಲಿ ನಾರಿಶಕ್ತಿ (ETV Bharat)

ಶತಮಾನದ ಹಿಂದೆ ಪುರುಷರಿಗೆ ನೀಡಿದಷ್ಟೇ ಪ್ರಾಧಾನ್ಯತೆಯನ್ನು ಮಹಿಳೆಯರಿಗೆ ಅಂದಿನ ರೇವಣಸಿದ್ದೇಶ್ವರ ಶ್ರೀಗಳು ನೀಡಿದ್ದಾರೆ. ಮಠದಲ್ಲಿ ಪ್ರತೀವರ್ಷ ಅಮವಾಸ್ಯೆ ದಿನ ಶಿವನ ರಥೋತ್ಸವ ನಡೆದರೆ ಮರುದಿನ ಪಾರ್ವತಿಯ ರಥೋತ್ಸವ ನಡೆಯುತ್ತದೆ. ಮೊದಲ ದಿನ ನಡೆಯುವ ರೇವಣಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವದಲ್ಲಿ ಪುರುಷರು ರಥ ಎಳೆದು ಸಂಭ್ರಮಿಸುತ್ತಾರೆ. ಮರುದಿನ ನಡೆಯುವ ಪಾರ್ವತಿದೇವಿ ರಥೋತ್ಸವದಲ್ಲಿ ಮಹಿಳೆಯರು ಮಾತ್ರ ರಥ ಎಳೆಯುತ್ತಾರೆ.

ಹಾವೇರಿಯ ಮಂತ್ರೋಡಿ ಕ್ಷೇತ್ರದಲ್ಲಿ ನಾರಿಶಕ್ತಿ (ETV Bharat)

ಕೆಂಜಡೇಶ್ವರ ಮಠದಿಂದ ಪಾದಗಟ್ಟೆಯವರಿಗೆ ಮತ್ತು ಪಾದಗಟ್ಟಿಯಿಂದ ಮಠದವರೆಗೆ ಸುಮಾರು 800 ಮೀಟರ್ ದೂರದಷ್ಟು ಮಹಿಳೆಯರೇ ರಥ ಎಳೆದು ಸಂಭ್ರಮಿಸುತ್ತಾರೆ. ಅದು ಪಾದಗಟ್ಟಿಯಿಂದ ಮಠಕ್ಕೆ ಹೋಗುವ ದಾರಿ ಬೆಟ್ಟದ ಮೇಲಿದ್ದರೂ ಸಹ ಮಹಿಳೆಯರೇ ರಥ ಎಳೆಯುತ್ತಾರೆ.

ಮಹಿಳೆಯರಿಂದ ಮಾತ್ರ ಎಳೆಯುವ ಪಾರ್ವತಿದೇವಿ ರಥ (ETV Bharat)

ಇದೇ ರಥೋತ್ಸವ ಗುರುವಾರ ಮಹಿಳೆಯರಿಂದಲೇ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ರೇವಣಸಿದ್ದೇಶ್ವರನಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತದೆ. ಪಲ್ಲಕ್ಕಿಯಲ್ಲಿ ಮೂರ್ತಿ ಇಟ್ಟು ಪ್ರದಕ್ಷಿಣೆ ಹಾಕಲಾಗುತ್ತದೆ. ಇದೇ ವೇಳೆ ಬೆಳ್ಳಿರಥೋತ್ಸವ ಪುಷ್ಪ ರಥೋತ್ಸವ ನಡೆಸಲಾಗುತ್ತದೆ.

ಹಾವೇರಿಯ ಮಂತ್ರೋಡಿ ಕ್ಷೇತ್ರದಲ್ಲಿ ನಾರಿಶಕ್ತಿ (ETV Bharat)

ನಂತರ ರೇವಣಸಿದ್ದೇಶ್ವರನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಮುಂಜಾನೆಯಿಂದಲೇ ಭಕ್ತರು ಮಠಕ್ಕೆ ಬಂದು ರೇವಣಸಿದ್ದೇಶ್ವರ ದರ್ಶನ ಪಡೆದರು. ಹಣ್ಣುಕಾಯಿ ನೈವೇದ್ಯ ಸಮರ್ಪಿಸಿದರು. ರೇವಣಸಿದ್ದೇಶ್ವರ ಮತ್ತು ಕೆಂಜಡೇಶ್ವರ ಸ್ವಾಮೀಜಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆ ಎಂಬ ನಂಬಿಕೆ ಇಲ್ಲಿ ಮನೆ ಮಾಡಿದೆ.

ಮಹಿಳಾ ಭಕ್ತರು ಸರತಿಯಲ್ಲಿ ನಿಂತು ರಥ ಎಳೆಯುತ್ತಾರೆ. ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆಯುತ್ತಾರೆ ಈ ರೀತಿ ಎಸೆದ ಉತ್ತತ್ತಿ, ಬಾಳೆಹಣ್ಣು ಕಳಸಕ್ಕೆ ಬಡಿದರೆ ಕೇಳಿಕೊಳ್ಳುವಂತಹ ಬೇಡಿಕೆಗಳು ಸಿದ್ದಿಸುತ್ತವೆ ಎಂಬುದು ನಂಬಿಕೆ.

ಈ ವರ್ಷ ಮಹಿಳಾ ಡೊಳ್ಳು ತಂಡ ಆಗಮಿಸಿದ್ದು ವಿಶೇಷವಾಗಿತ್ತು. ಮಹಿಳೆಯರ ತಂಡ ವೈವಿಧ್ಯಮಯ ಕಸರತ್ತು ಪ್ರದರ್ಶಿಸುವ ಮೂಲಕ ಗಮನ ಸೆಳೆಯಿತು.

ಇದನ್ನೂ ಓದಿ:ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ವಿಧ್ಯುಕ್ತ ತೆರೆ: 25 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಪ್ರಸಾದ ಸ್ವೀಕಾರ

ABOUT THE AUTHOR

...view details