ಕರ್ನಾಟಕ

karnataka

ETV Bharat / state

ನೈಋತ್ಯ ಮಾನ್ಸೂನ್ ಮತ್ತೆ ಚುರುಕು ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಣೆ - alert announced to coastal - ALERT ANNOUNCED TO COASTAL

ಕರಾವಳಿ ಕರ್ನಾಟಕದ ಜಿಲ್ಲೆಗಳಿಗೆ ಆರೆಂಜ್ ಹಾಗೂ ರೆಡ್ ಅಲರ್ಟ್​ ಘೋಷಿಸಲಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

Rain
ಮಳೆ (IANS)

By ETV Bharat Karnataka Team

Published : Jul 12, 2024, 6:34 PM IST

Updated : Jul 12, 2024, 8:46 PM IST

ಬೆಂಗಳೂರು :ಕರಾವಳಿ ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತಷ್ಟು ರಭಸ ಪಡೆದಿದ್ದು, ಅಲ್ಲಿನ ಜಿಲ್ಲೆಗಳಿಗೆ ಆರೆಂಜ್ ಮತ್ತು ರೆಡ್ ಅಲರ್ಟ್ ನೀಡಲಾಗಿದೆ. ಇಂದೂ ಸೇರಿದಂತೆ ಐದು ದಿನಗಳ ಕಾಲ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಹೈ ಅಲರ್ಟ್ ನೀಡಲಾಗಿದೆ. ನಾಳೆ ಮತ್ತು ನಾಡಿದ್ದು ರೆಡ್ ಅಲರ್ಟ್ ಇದ್ದರೆ, ಇಂದು ಜುಲೈ 15 ಮತ್ತು 16 ರಂದು ಆರೆಂಜ್ ಅಲರ್ಟ್ ಕೊಡಲಾಗಿದೆ.

ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿಗೆ ಐದು ದಿನ ಯೆಲ್ಲೋ ಅಲರ್ಟ್ ಇದ್ದರೆ, ಕಲಬುರಗಿ ಜಿಲ್ಲೆಗೆ ಇಂದು ಮತ್ತು ಜುಲೈ 14, 15 ರಂದು, ರಾಯಚೂರು, ವಿಜಯಪುರ ಜಿಲ್ಲೆಗಳಿಗೆ ಜುಲೈ 14 ಮತ್ತು 15 ಕ್ಕೆ, ಯಾದಗಿರಿ ಜಿಲ್ಲೆಗೆ ಇಂದು ಮತ್ತು ಜುಲೈ 14 ರಂದು, ಬಾಗಲಕೋಟೆ, ಬೀದರ್ ಜಿಲ್ಲೆಗಳಿಗೆ ಜುಲೈ 15 ರಂದು ಯೆಲ್ಲೋ ಅಲರ್ಟ್ ಘೋಷಿಸಿಲಾಗಿದೆ.

ಇನ್ನು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಇಂದು ಯೆಲ್ಲೋ ಮತ್ತು ಮುಂದಿನ ನಾಲ್ಕು ದಿನ ಆರೆಂಜ್ ಅಲರ್ಟ್ ಕೊಡಲಾಗಿದೆ. ಹಾಸನ ಜಿಲ್ಲೆಗೆ ಜುಲೈ 14, 16 ರಂದು ಯೆಲ್ಲೋ ಮತ್ತು ಜುಲೈ 15 ಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ. ಮೈಸೂರು ಜಿಲ್ಲೆಗೆ ಜುಲೈ 14, 15 ರಂದು ಯೆಲ್ಲೋ, ದಾವಣಗೆರೆ ಜಿಲ್ಲೆಗೆ ಜುಲೈ 15 ಮತ್ತು 16 ರಂದು, ಚಿತ್ರದುರ್ಗ ಜಿಲ್ಲೆಗೆ 14ಕ್ಕೆ, ತುಮಕೂರು, ವಿಜಯನಗರ ಜಿಲ್ಲೆಗೆ ಜುಲೈ 15 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ 30 ರಿಂದ 40 ಕಿಲೋಮೀಟರ್ ಪ್ರತಿ ಗಂಟೆಗೆ ಗಾಳಿ ಬೀಸಲಿದ್ದು, ಭಾರಿ ಮಳೆಯಾಗಲಿದೆ. ಉತ್ತರ ಒಳನಾಡು ಭಾಗದ ಬೆಳಗಾವಿ, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ನಿರಂತರ ಗಾಳಿ ಇರಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ. ನಿರಂತರ ಗಾಳಿ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಡಿಗ್ರಿ ಮತ್ತು 21 ಡಿಗ್ರಿ ದಾಖಲಾಗಲಿದೆ.

'ದಕ್ಷಿಣ ಗುಜರಾತ್ - ಉತ್ತರ ಕೇರಳದ ಕರಾವಳಿಯಲ್ಲಿ ಸಮುದ್ರ ಮಟ್ಟದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳು ಇದ್ದು, ಸರಾಸರಿ ಸಮುದ್ರ ಮಟ್ಟದಿಂದ 5.8 ಕಿಮೀ ಎತ್ತರದಲ್ಲಿ ಇದೆ' ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎನ್ ಪುವಿಯರಸನ್ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಇಂದಿನ ನೀರಿನ ಮಟ್ಟದ ವಿವರ:

ಶಿವಮೊಗ್ಗ ಜಿಲ್ಲೆಯ ಇಂದಿನ ನೀರಿನ ಮಟ್ಟದ ವಿವರ (ETV Bharat)

ತುಂಗಾ ಅಣೆಕಟ್ಟೆ

ಇಂದಿನ ನೀರಿನ ಮಟ್ಟ: 586.24 ಮೀಟರ್.

ಒಳ ಹರಿವು- 13.174 ಸಾವಿರ ಕ್ಯೂಸೆಕ್.

ಹೊರ ಹರಿವು -13.174 ಸಾವಿರ ಕ್ಯೂಸೆಕ್.

ಕಳೆದ ವರ್ಷ- 586.24 ಮೀಟರ್.


ಭದ್ರಾ ಅಣೆಕಟ್ಟೆ

ಒಟ್ಟು ಎತ್ತರ : 186 ಅಡಿ

ಇಂದಿನ ನೀರಿನ ಮಟ್ಟ -136.9 ಅಡಿ.

ಒಳ ಹರಿವು -5.737 ಕ್ಯೂಸೆಕ್.

ಹೊರ ಹರಿವು-159 ಕ್ಯೂಸೆಕ್.

ಕಳೆದ ವರ್ಷ-140.3 ಅಡಿ.

ಲಿಂಗನಮಕ್ಕಿ ಅಣೆಕಟ್ಟೆ

ಒಟ್ಟು ಎತ್ತರ- 1819

ಇಂದಿನ ನೀರಿನ ಮಟ್ಟ-1772.50 ಅಡಿ.

ಒಳ ಹರಿವು-10.999 ಕ್ಯೂಸೆಕ್.

ಹೊರ ಹರಿವು-3440.05 ಕ್ಯೂಸೆಕ್.(ವಿದ್ಯುತ್ ಗಾಗಿ)

ಕಳೆದ ವರ್ಷ-1751.95 ಅಡಿ.

ಇದನ್ನೂ ಓದಿ :ರಾಜ್ಯದ ಬಹುತೇಕ ಕಡೆ ಹೈ ಅಲರ್ಟ್ ಘೋಷಣೆ: ಕರಾವಳಿ ಭಾಗದಲ್ಲಿ ಮತ್ತೆ ಇನ್ನೈದು ದಿನ ಹೆಚ್ಚಿನ ಮಳೆ ಮುನ್ಸೂಚನೆ! - high alert in coastal

Last Updated : Jul 12, 2024, 8:46 PM IST

ABOUT THE AUTHOR

...view details