ಹುಬ್ಬಳ್ಳಿ:ಸಿದ್ದರಾಮಯ್ಯ ಸುಳ್ಳು ಹೇಳೋದನ್ನೆ ಕಾಯಕ ಮಾಡಿಕೊಂಡಿದ್ದಾರೆ. ಮೊದಲು ಎನ್ಡಿಆರ್ಎಫ್ ಫಂಡ್ನಲ್ಲಿ ಇಷ್ಟು ಪ್ರಮಾಣದ ಹಣ ಕೊಡುತಿರಲಿಲ್ಲ. ನಾವು ಅಡ್ವಾನ್ಸ್ ಹಣ ಕೊಡುತ್ತಿದ್ದೇಬೆ. ಯಡಿಯೂರಪ್ಪ ಅದೇ ಹಣವನ್ನು ಬರಗಾಲ ಬಂದಾಗ ಹಂಚಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಆರ್ಥಿಕ ದುಸ್ಥಿತಿಗೆ ತಂದು ಕೇಂದ್ರದತ್ತ ಬೊಟ್ಟು ಮಾಡ್ತಿದ್ದಾರೆ. ಆದ್ರೆ ನಾವು ಒಂದೇ ಒಂದು ರೂಪಾಯಿ ಜಿಎಸ್ಟಿ ಹಣ ಕೊಡೋದು ಬಾಕಿ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎನ್ಡಿಆರ್ಎಫ್ನಲ್ಲಿ ನಾವು 12 ಸಾವಿರ ಕೋಟಿ ಕೊಟ್ಟಿದ್ದೇವೆ. ಡೆವಲೂಷನ್ ಫಂಡ್ ಅವರ ಕಾಲದಲ್ಲಿ 60 ಸಾವಿರ ಕೋಟಿ, ನಮ್ಮ ಕಾಲದಲ್ಲಿ 2 ಲಕ್ಷ 36 ಸಾವಿರ ಕೋಟಿ ಕೊಟ್ಟಿದ್ದೇವೆ. ತೆರಿಗೆ ಹಂಚಿಕೆಯಲ್ಲಿ 10 ವರ್ಷದಲ್ಲಿ 81 ಸಾವಿರ ಕೋಟಿ, ನಮ್ಮ ಕಾಲದಲ್ಲಿ 2 ಲಕ್ಷ 85 ಸಾವಿರ ಕೋಟಿ ಕೊಟ್ಟಿದ್ದೇವೆ. ಇವರು ಯಾವುದೇ ಗ್ರ್ಯಾಂಟ್ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ನಾವು ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ. 2004 ರಿಂದ 2014 ರಲ್ಲಿ 1667 ಕೋಟಿ ಬಿಡುಗಡೆಯಾಗಿತ್ತು ಎಂದರು.
ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಅವರು ಸುಳ್ಳು ರಾಮಯ್ಯ. ನಾನು ನಿನ್ನೆಯಿಂದ ಸಿದ್ದರಾಮಯ್ಯರನ್ನ ಸುಳ್ಳು ರಾಮಯ್ಯ ಎಂದು ಕರೆಯಯುತ್ತಿದ್ದೇನೆ ಎಂದರು. ಮಹದಾಯಿ ವಿಚಾರದಲ್ಲಿ ಅರಣ್ಯ ಇಲಾಖೆ ನಿರಾಕರಣೆ ಮಾಡಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಇನ್ನು ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವರು, ನಮ್ಮ ಕೃಷಿ ಸಚಿವರು ಅವರ ಜೊತೆ ಮಾತುಕತೆ ಮಾಡುತ್ತಿದ್ದಾರೆ. ರೈತರು ಹೊಸ ಬೇಡಿಕೆ ಇಟ್ಟಿದ್ದಾರೆ. ನಮ್ಮ ಸರ್ಕಾರ ಅವರ ಎಲ್ಲ ಬೇಡಿಕೆಗಳನ್ನು ಸಹಾನಭೂತಿಯಿಂದ ಪರಿಶೀಲನೆ ಮಾಡುತ್ತಿದೆ. ಕಲ್ಲು ಹೊಡೆಯೋದು ಕೆಲಸವಲ್ಲ. ರೈತರ ಬಗ್ಗೆ ನಾವು ಸಹಾನುಭೂತಿಯಿಂದ ಇದ್ದೇವೆ. ರೈತರು ಮಾತುಕತೆಗೆ ಬರಬೇಕು. ನಾವು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ. ಅನುಮತಿ ಇಲ್ಲದೇ ಬಂದವರನ್ನು ತಡೆಯೋ ಕೆಲಸ ಆಗ್ತಿದೆ ಎಂದರು.
ಈಗ ಅಂಕಿ- ಸಂಖ್ಯೆಯೇ ಮಾಯ:ಸಿದ್ದರಾಮಯ್ಯ ಹೇಳೋದೆ ಸುಳ್ಳು. ಹಾಗಿದ್ದರೆ ಅವರು ಹತ್ತು ಸಲ ರಾಜಕೀಯ ನಿವೃತ್ತಿಯಾಗಬೇಕು. ಅನುದಾನದ ವಿಚಾರವಾಗಿ ಅವರ ಡ್ಯಾಶ್ ಬೋರ್ಡ್ನಲ್ಲಿ ಎಲ್ಲ ಮಾಹಿತಿ ಹಾಕಿದ್ರು. ನಾವು ಅದನ್ನು ಡೌನಲೋಡ್ ಮಾಡಲು ಬಿಜೆಪಿ ನಾಯಕರಿಗೆ ಸೂಚಿಸಿದ್ದೆ. ಇದೀಗ ಅಂಕಿ ಸಂಖ್ಯೆಯೇ ಡಿಲೀಟ್ ಆಗಿದೆ ಎಂದು ಜೋಶಿ ಗಂಭೀರ ಆರೋಪ ಮಾಡಿದರು.