ಬೆಂಗಳೂರು:ಮನೆ ಮುಂದೆ ನಿಲ್ಲಿಸಿದ್ದ ಹಳೇ ಸ್ಕೂಟರ್‌ನ ಬಿಡಿ ಭಾಗಗಳನ್ನು ಕಳ್ಳನೊಬ್ಬ ಕದ್ದೊಯ್ದಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 14ರಂದು ಬೇಗೂರಿನ ರಾಯಲ್ ಮೆರಿಡಿಯನ್ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಒಂದೇ ತಿಂಗಳಿನಲ್ಲಿ ಎರಡೆರಡು ಬಾರಿ ರಾತ್ರಿ ಸಮಯದಲ್ಲಿ ಬಂದಿರುವ ಕಳ್ಳ, ನಿರ್ಭೀತಿಯಿಂದ ದ್ವಿಚಕ್ರ ವಾಹನದ ಭಾಗಗಳನ್ನು ಬಿಚ್ಚಿಕೊಂಡು ಕದ್ದೊಯ್ದಿದ್ದಾನೆ. ಕಳ್ಳನ ಉಪಟಳದಿಂದ ಬೇಸತ್ತ ಸ್ಕೂಟರ್ ಮಾಲೀಕ ಸುಬ್ರಹ್ಮಣ್ಯ ನವ್ಗಿರೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಎಕ್ಸ್ನಲ್ಲಿನ ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕೋರಿದ್ದಾರೆ.