ಕರ್ನಾಟಕ

karnataka

ETV Bharat / state

ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಓಲಾ ಆಟೋ ಚಾಲಕ ಸೆರೆ - OLA Auto Driver Arrested - OLA AUTO DRIVER ARRESTED

ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಓಲಾ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

OLA AUTO DRIVER ARRESTED
ಬಂಧಿತ ಆರೋಪಿ (Viral Video Screen Grab)

By ETV Bharat Karnataka Team

Published : Sep 6, 2024, 12:49 PM IST

ಬೆಂಗಳೂರು: ಬುಕ್ ಮಾಡಿದ್ದ ಓಲಾ ಆಟೋ ರದ್ದು ಮಾಡಿದ್ದಕ್ಕೆ ಆಕ್ರೋಶಗೊಂಡ ಆಟೋ ಚಾಲಕನೊಬ್ಬ ಯುವತಿಯನ್ನು ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ನಗರದಲ್ಲಿ ನಡೆದಿದ್ದು, ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ.

ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.2ರಂದು ಯುವತಿ, ಓಲಾ ಆಟೋ ಬುಕ್ ಮಾಡಿದ್ದರು. ಸಕಾಲಕ್ಕೆ ಆಟೋ ಬಾರದ ಕಾರಣ ಮತ್ತೊಂದು ಆಟೋ ಬುಕ್ ಮಾಡಿದ್ದರು. ಮುಂಚಿತವಾಗಿ ಬಂದ ಆಟೋ ಹತ್ತಿ, ಈ ಹಿಂದೆ ಬುಕ್ ಮಾಡಿದ್ದ ಆರ್ಡರ್ ರದ್ದು ಮಾಡಿದ್ದರು. ಇದನ್ನು ಗಮನಿಸಿದ ಆಟೋ ಚಾಲಕ ಯುವತಿಯನ್ನು ಹಿಂಬಾಲಿಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣ 'ಎಕ್ಸ್'​ನಲ್ಲಿ ಯುವತಿಯ ಸ್ನೇಹಿತೆ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್​ ಮಾಡಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ಪೋಸ್ಟ್​ ಮಾಡಿಕೊಂಡಿರುವುದು (Viral Video Screen Grab)

ಘಟನೆ ಬೆಳಕಿಗೆ ಬರುತ್ತಿದ್ದಂತೆ ಪರಿಶೀಲಿಸಿದ ಪೊಲೀಸರು, ಆಟೋ ಚಾಲಕ ಮುತ್ತುರಾಜ್ ಎಂಬಾತನನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಯುವತಿಗೂ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ಪ್ರತಿಕ್ರಿಯೆ:ಆಟೋ ಚಾಲಕನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಅಪರಾಧಕ್ಕಾಗಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಾಮಾಜಿಕ ಜಾಲತಾಣದ 'ಎಕ್ಸ್'​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:ಕಾರು ಚಾಲಕನ ಮುಖಕ್ಕೆ ಉಗಿದ ಆಟೋ ಚಾಲಕನ ಬಂಧನ! - Auto Driver Arrest

ABOUT THE AUTHOR

...view details