ಕರ್ನಾಟಕ

karnataka

ETV Bharat / state

ಪ್ರಹ್ಲಾದ್ ಜೋಶಿ ಅಭ್ಯರ್ಥಿಯಾಗಿರುವುದಕ್ಕೆ ಅಭ್ಯಂತರವಿಲ್ಲ: ಮೂಜಗು ಶ್ರೀ ಸ್ಪಷ್ಟನೆ - Moojagu Shri Clarification - MOOJAGU SHRI CLARIFICATION

ಪ್ರಹ್ಲಾದ್ ಜೋಶಿ ಅಭ್ಯರ್ಥಿಯಾಗಿರುವುದಕ್ಕೆ ನಮಗೆ ಅಭ್ಯಂತರವಿಲ್ಲ. ಶ್ರೀಮಠವು ಯಾವಾಗಲೂ ರಾಜಕೀಯ ಅಂತರ ಕಾಯ್ದುಕೊಂಡು ಬಂದಿದೆ ಎಂದು ಮೂಜಗು ಶ್ರೀ ಸ್ಪಷ್ಟನೆ ನೀಡಿದ್ದಾರೆ.

PRALHAD JOSHI  HUBLI  LOK SABHA ELECTION 2024
ಮೂಜಗು ಶ್ರೀ ಸ್ಪಷ್ಟನೆ ಪತ್ರ

By ETV Bharat Karnataka Team

Published : Mar 30, 2024, 12:56 PM IST

ಮೂರುಸಾವಿರ ಮಠದ ಗುರುಸಿದ್ದರಾಜಯೋಗಿಂದ್ರ ಸ್ಬಾಮೀಜಿ ಹೇಳಿಕೆ

ಹುಬ್ಬಳ್ಳಿ:ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಧಾರವಾಡ ಲೋಕಸಭಾ ಕ್ಷೇತ್ರದಿಂದ ಬದಲಾಯಿಸಬೇಕು ಎಂಬ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಸಾಕಷ್ಟು ತಿರುವು ಪಡೆದುಕೊಳ್ಳುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಮೂರುಸಾವಿರ ಮಠದಲ್ಲಿ ಲಿಂಗಾಯತ ಮಠಾಧೀಶರ ಚಿಂಥನ-ಮಂಥನ ಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಈಗ ಜ. ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಅಪಸ್ವರವೆತ್ತಿದ್ದಾರೆ.

ಪ್ರಹ್ಲಾದ ಜೋಶಿ ಅವರ ಆಯ್ಕೆಯ ಬಗ್ಗೆ ತಮ್ಮದು ಅಪಸ್ವರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶ್ರೀಮಠದಲ್ಲಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆದ ಚಿಂಥನ ಮಂಥನ ಸಭೆಯಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ನೀಡಿರುವ ಟಿಕೆಟ್​ನ್ನು ಬಿಜೆಪಿ ವರಿಷ್ಠರು ಮಾ. 31ರೊ ಳಗೆ ಬದಲಿಸಬೇಕು. ಇಲ್ಲದಿದ್ದರೆ ಏ. 2ರಂದು ನಮ್ಮ ನಿರ್ಧಾರ ಪ್ರಕಟಿಸಬೇಕಾಗುತ್ತದೆ ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯಕ್ಕೆ ಮೂಜಗು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಭೆಯಲ್ಲಿ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಸೇರಿದಂತೆ 40ಕ್ಕೂ ಅಧಿಕ ಲಿಂಗಾಯತ ಮಠಾಧೀಶರು ಪಾಲ್ಗೊಂಡಿದ್ದರು. ಆದರೆ, ಮೂರುಸಾವಿರ ಮಠದ ಶ್ರೀಗಳು ಶುಕ್ರವಾರ ಸಂಜೆ ಅಧಿಕೃತ ಪ್ರಕಟಣೆ ಹೊರಡಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಮೂಜಗು ಶ್ರೀ ಸ್ಪಷ್ಟನೆ ಪತ್ರ

ಪತ್ರದಲ್ಲೇನಿದೆ?: ''ಪ್ರಹ್ಲಾದ ಜೋಶಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ತಮ್ಮ ಅಭ್ಯಂತರವಿಲ್ಲ. ಶ್ರೀಮಠವು ಯಾವಾಗಲೂ ರಾಜಕೀಯ ಅಂತರ ಕಾಯ್ದುಕೊಂಡು ಬಂದಿದೆ. ಎಲ್ಲ ರಾಜಕೀಯ ಪಕ್ಷಗಳನ್ನು ಸಮನಾಗಿ ಕಾಣುತ್ತಾ ಬಂದಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಶ್ರೀಮಠಕ್ಕೆ ಆಗಮಿಸಿ ಆಶೀರ್ವಾದ ತೆಗೆದುಕೊಂಡು ಹೋಗುತ್ತಾರೆ. ಸರ್ವರನ್ನು ಸಮಭಾವದಿಂದ ಕಾಣುವುದು ಶ್ರೀಮಠದ ಸದ್ಭಾವನೆಯಾಗಿದೆ. ಯಾವಾಗಲೂ ಮಠವು ರಾಜಕೀಯ ಪ್ರೇರಿತ ಹೇಳಿಕೆ ಕೊಟ್ಟಿಲ್ಲ ಮತ್ತು ಕೊಡುವುದೂ ಇಲ್ಲ. ಇಂದಿಗೂ ಅದನ್ನು ನಾವು ಕಾಯ್ದುಕೊಂಡು ಬಂದಿದ್ದೇವೆ.

ಯಾವುದೇ ಒಂದು ಪಕ್ಷದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದರೆ ಆ ಪಕ್ಷದ ಕಾರ್ಯಕರ್ತರು ಮತ್ತು ವರಿಷ್ಠರಿಗೆ ಸಂಬಂಧಪಟ್ಟದ್ದು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆಯ್ಕೆಗೆ ವಿರೋಧ ಮಾಡಿಲ್ಲ. ಅವರ ಮತ್ತು ನಮ್ಮ ನಡುವೆ ವೈಯಕ್ತಿಕವಾಗಿ ಬಾಂಧವ್ಯವು ತುಂಬಾ ಚೆನ್ನಾಗಿರುತ್ತದೆ. ಪ್ರಹ್ಲಾದ ಜೋಶಿ ಅವರು ಕೂಡಾ ಶ್ರೀಮಠದೊಡನೆ ಸೌಹಾರ್ದಯುತವಾಗಿ ಸದಾ ಭಕ್ತಿ ಭಾವದಿಂದ ನಡೆದುಕೊಂಡಿದ್ದಾರೆ'' ಎಂದು ಅಧಿಕೃತವಾಗಿರುವ ಪತ್ರ ಶ್ರೀಮಠದಿಂದ ಬಿಡುಗಡೆಯಾಗಿದೆ.

ಅಂದು ಸ್ವಾಮೀಜಿ ಹೇಳಿದ್ದೇನು..?: ಮೂರುಸಾವಿರ ಮಠ ರಾಜಕೀಯ ಪಕ್ಷಗಳ ಜೊತೆ ಉತ್ತಮ ಸಂಬಂಧ ಹೊಂದಿದೆ. ಎಲ್ಲಾ ರಾಜಕೀಯ ಪಕ್ಷಗಳು ಸಾಮಾಜಿಕ‌ ನ್ಯಾಯ ಒದಗಿಸುವಲ್ಲಿ ವಿಫಲವಾಗಿವೆ. ಆಗ ಎಚ್ಚರಿಸುವ ಕೆಲಸ ಮಾಡಿದ್ದೇವೆ. ವೀರಶೈವ ಲಿಂಗಾಯತ ಸಮಾಜಕ್ಕೆ ಸಾಮಾಜಿಕ‌ ನ್ಯಾಯ ಒದಗಿಸಲು ‌ಹಿಂದೇಟು ಹಾಕಿರುವ ವಿಚಾರ ಚರ್ಚೆಗೆ ಬಂದಿದೆ.‌ ಕಲಘಟಗಿ ಕಾರ್ಯಕ್ರಮದಲ್ಲಿ ತಮಗೂ ಕೆಲವರು ದಾರಿ ತಪ್ಪಿಸಿದ್ದರು ಎಂದು ಹೇಳಿದ್ದರು.

ಓದಿ:ದಿಂಗಾಲೇಶ್ವರ ಸ್ವಾಮೀಜಿ ಸ್ವಾರ್ಥಕ್ಕಾಗಿ ಜೋಶಿ ವಿರುದ್ಧ ವೃಥಾ ಆರೋಪ: ರುದ್ರಮುನಿ‌ ಸ್ವಾಮೀಜಿ - DHARWAD LOK SABHA CONSTITUENCY

ABOUT THE AUTHOR

...view details