ಕರ್ನಾಟಕ

karnataka

ETV Bharat / state

ವಯನಾಡ್‌ನಲ್ಲಿ ಅಜ್ಜಿ, ಮೊಮ್ಮಗ ಸಾವು: ಕುಟುಂಬಸ್ಥರಿಗೆ ನಿಖಿಲ್ ಕುಮಾರಸ್ವಾಮಿ ಸಾಂತ್ವನ - Nikhil Kumaraswamy - NIKHIL KUMARASWAMY

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಅಜ್ಜಿ ಹಾಗೂ ಮೊಮ್ಮಗ ವಯನಾಡ್‌ನಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಮೃತರ ಮನೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

nikhil-kumaraswamy
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಾಂತ್ವನ (ETV Bharat)

By ETV Bharat Karnataka Team

Published : Aug 1, 2024, 8:20 PM IST

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ (ETV Bharat)

ಮಂಡ್ಯ: ಇಲ್ಲಿನ ಕತ್ತರಘಟ್ಟದ ಲೀಲಾವತಿ (55) ಮತ್ತು ಇವರ ಮೊಮ್ಮಗ ನಿಹಾಲ್ (2.5 ವರ್ಷ) ವಯನಾಡ್‌ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿರುವ ಮೃತರ ಮನೆಗೆ ಇಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಾಸಕ ಹೆಚ್.ಟಿ.ಮಂಜು ಹಾಗೂ ಜೆಡಿಎಸ್ ನಾಯಕರು ಜೊತೆಗಿದ್ದರು.

ತಮ್ಮವರನ್ನು ನೆನೆದು ಕಣ್ಣೀರು ಹಾಕುತ್ತಿದ್ದ ಕುಟುಂಬಸ್ಥರಿಗೆ ನಿಖಿಲ್ ಸಮಾಧಾನ ಹೇಳಿದರು. ಇದೇ ವೇಳೆ ಮೃತರ ಕುಟುಂಬಕ್ಕೆ 70 ಸಾವಿರ ರೂಪಾಯಿ ಧನಸಹಾಯ ಮಾಡಿದರು. ಧೈರ್ಯವಾಗಿರಿ, ನಾವು ನಿಮ್ಮೊಂದಿಗಿದ್ದೇವೆ ಎಂದರು.

"ದುರಂತ ನಡೆದು ಹೋಗಿದೆ. ನಮ್ಮವರ ಮೃತದೇಹವನ್ನಾದರೂ ಕೊಡಿಸಿ. ಅವರ ಮುಖವನ್ನಾದರೂ ನಾವು ನೋಡುತ್ತೇವೆ. ಅವರ ಅಂತ್ಯಕ್ರಿಯೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡಿ" ಎಂದು ಕುಟುಂಬಸ್ಥರು ಕಣ್ಣೀರು ಹಾಕಿದರು.

"ಮೃತದೇಹಗಳ ಹುಡುಕಾಟ ನಡೆಯುತ್ತಿದೆ. ನಾವೂ ಸಹ ಈ ಬಗ್ಗೆ ಮುತುವರ್ಜಿ ವಹಿಸುತ್ತೇವೆ" ಎಂದು ನಿಖಿಲ್ ತಿಳಿಸಿದರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, "ಭೂಕುಸಿತದಲ್ಲಿ ಬಹಳಷ್ಟು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೃತ ಲೀಲಾವತಿ ಕುಟುಂಬದವರು ಮೃತದೇಹವನ್ನು ಕೊಡಿಸಿ ಎಂದಿದ್ದಾರೆ. ಆ ಪ್ರಯತ್ನ ಮಾಡುತ್ತೇವೆ" ಎಂದರು.

ಇದನ್ನೂ ಓದಿ:ಆರೋಗ್ಯ ನೆರವು : ಗಡಿಜಿಲ್ಲೆ ವೈದ್ಯರಿಂದ ವಯನಾಡಿನಲ್ಲಿ ತುರ್ತು ಸೇವೆ - medical services in wayanad

ABOUT THE AUTHOR

...view details