ಕರ್ನಾಟಕ

karnataka

ETV Bharat / state

ನೆಲಮಂಗಲ: ಮಹಿಳೆ ಬಲಿ ಪಡೆದಿದ್ದ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆ - LEOPARD CAPTURE OPERATION

ಭಾನುವಾರ ಸಂಜೆ ಮನೆಯ ಹಿಂದೆ ಹುಲ್ಲು ಕೊಯ್ಯಲು ಹೋಗಿದ್ದ ಮಹಿಳೆಯ ಮೇಲೆ ದಾಳಿ ಮಾಡಿದ್ದ ಚಿರತೆ ಮುಂಡವನ್ನು ಅಲ್ಲೇ ಬಿಟ್ಟು, ರುಂಡವನ್ನು ಹೊತ್ತೊಯ್ದಿತ್ತು.

LEOPARD CAPTURE OPERATION
ಚಿರತೆ ಸೆರೆ ಕಾರ್ಯಾಚರಣೆ (ETV Bharat)

By ETV Bharat Karnataka Team

Published : Nov 19, 2024, 1:54 PM IST

ನೆಲಮಂಗಲ: ಶಿವಗಂಗೆ ಬೆಟ್ಟದ ತಪ್ಪಲಲ್ಲಿರುವ ಕಂಬಾಳುಗೊಲ್ಲರಹಳ್ಳಿ ಗ್ರಾಮದಲ್ಲಿ ಭಾನುವಾರ ಮಹಿಳೆಯ ಜೀವ ಬಲಿ ಪಡೆದಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಗ್ರಾಮದಲ್ಲಿ ಬೀಡು ಬಿಟ್ಟಿದೆ. ಡ್ರೋನ್​ ಕ್ಯಾಮರಾದ ಮೂಲಕ ಚಿರತೆ ಚಲನವನದ ಬಗ್ಗೆ ಗಮನ ಇಟ್ಟಿದೆ.

ಘಟನೆ ಬಗ್ಗೆ ಈಟಿವಿ ಭಾರತ್​ಗೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಾಲಿಂಗಯ್ಯ, "ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು, 4 ನಾಲ್ಕು ಮನೆಗಳು ಶಿವಗಂಗೆಯ ಬೆಟ್ಟದ ತಪ್ಪಲಲ್ಲಿವೆ. ಇನ್ನುಳಿದ ಮನೆಗಳು ಬೆಟ್ಟದಿಂದ ದೂರದಲ್ಲಿವೆ. ಮೃತ ಕರಿಯಮ್ಮ ಮನೆ ಬೆಟ್ಟದ ತಪ್ಪಲಲ್ಲಿದ್ದು, ಮನೆಯಿಂದ 50 ಮೀಟರ್ ದೂರದಲ್ಲಿ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಇದ್ದು, ಜನರು ಹೊಲ ಮತ್ತು ತೋಟಗಳಿಗೆ ಹೋಗಲು ಹೆದರುವ ಪರಿಸ್ಥಿತಿ ಇದೆ. ರಾಗಿ ಕೊಯ್ಲು ಸಮಯವಾಗಿದ್ದು, ಚಿರತೆ ಭಯದಿಂದ ರಾಗಿ ಕೊಯ್ಲು ಮಾಡಲು ಸಹ ಜನ ಹೆದರುತ್ತಿದ್ದಾರೆ. ರಾಗಿ ಹೊಲಗಳಲ್ಲಿ ಅವಿತುಕೊಂಡು ಮನುಷ್ಯನ ಮೇಲೆ ದಾಳಿ ಮಾಡುವ ಭಯ ಗ್ರಾಮಸ್ಥರಿಗಿದೆ. ಚಿರತೆ ದಾಳಿ ಮಾಡಿದ ಸ್ಥಳದಿಂದ 200 ಮೀಟರ್ ದೂರದಲ್ಲಿ ಅಂಗನವಾಡಿ ಕೇಂದ್ರ ಇದ್ದು, 15 ಮಕ್ಕಳು ಅಂಗನವಾಡಿಗೆ ಹೋಗುತ್ತಾರೆ. ಚಿರತೆ ದಾಳಿಯಿಂದಾಗಿ ಅಂಗನವಾಡಿಯ ಬಾಗಿಲು ತೆರೆಯಲು ಭಯ ಪಡುವಂತಾಗಿದೆ" ಎಂದರು.

ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಸೈಯದ್ ನಿಜಾಮುದ್ದೀನ್ ಮಾತನಾಡಿ, "ಚಿರತೆ ಸೆರೆ ಹಿಡಿಯಲು ಬೆಂಗಳೂರಿನಿಂದ ಟಾಸ್ಕ್ ಫೋರ್ಸ್ ತಂಡವನ್ನು ಕರೆಸಲಾಗಿದೆ. ಅರಣ್ಯಾಧಿಕಾರಿ ಸಂಜಯ್ ಗುಬ್ಬಿ ಅವರು ಕಾರ್ಯಾಚರಣೆ ಸ್ಥಳದಲ್ಲಿದ್ದು, ಅವರ ನೆರವು ಪಡೆಯಲಾಗುತ್ತಿದೆ. ಡ್ರೋನ್​ ಕ್ಯಾಮರಾಗಳ ಮೂಲಕ ಚಿರತೆ ಚಲನವನದ ಬಗ್ಗೆ ಕಣ್ಣಿಡಲಾಗಿದೆ" ಎಂದರು.

ಉಪಟಳ ಕೊಡುತ್ತಿದ್ದ ಚಿರತೆ ಸ್ಥಗಿತಗೊಂಡಿದ್ದ ಕ್ವಾರಿಯಲ್ಲಿ ಸೆರೆ:ಉಪಟಳ ಕೊಡುತ್ತಿದ್ದ ಚಿರತೆಯೊಂದು ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಸಮೀಪ ಸೆರೆಯಾಗಿದೆ. ಅಂದಾಜು 6 ವರ್ಷದ ಗಂಡು ಚಿರತೆಯಾಗಿದ್ದು, ಸ್ಥಗಿತಗೊಂಡಿದ್ದ ಕರಿಕಲ್ಲು ಕ್ವಾರಿಯನ್ನು ಅವಾಸಸ್ಥಾನ ಮಾಡಿಕೊಂಡಿತ್ತು‌.

ಚಿರತೆ ಸೆರೆ (ETV Bharat)

ಬ್ಯಾಡಮೂಡ್ಲು ಗ್ರಾಮದ ಸುತ್ತಮುತ್ತಲು ಜಾನುವಾರುಗಳ ಮೇಲೆ ದಾಳಿ ನಡೆಸಿ ಉಪಟಳ ಕೊಡುತ್ತಿದ್ದ ಚಿರತೆ ಸೆರೆಗಾಗಿ ಬಿಆರ್​ಟಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಬಫರ್ ವಲಯ ಅಧಿಕಾರಿಗಳು ಬೋನ್ ಇರಿಸಿದ್ದರು. ಆಹಾರ ಅರಸಿ ಬಂದ ಚಿರತೆ ಬೋನ್​ನಲ್ಲಿ ಸೆರೆಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ನಿರಾಳರಾಗಿದ್ದಾರೆ‌. ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಇದನ್ನೂ ಓದಿ:ನೆಲಮಂಗಲ: ಮಹಿಳೆ ಮೇಲೆ ದಾಳಿ ಮಾಡಿ ರುಂಡ ಹೊತ್ತೊಯ್ದ ಚಿರತೆ

ABOUT THE AUTHOR

...view details