ರಾಯಚೂರು:ಗಾಳಿಸಹಿತ ಸುರಿದ ಭಾರೀ ಮಳೆಗೆ ರಾಯಚೂರು ನಗರದ ಎಂ.ಈರಣ್ಣ ಸರ್ಕಲ್‌ನಲ್ಲಿ ಬೃಹತ್ ಬೇವಿನಮರ ವಿದ್ಯುತ್ ತಂತಿ ಮತ್ತು ತರಕಾರಿ ಮಾರಾಟದ ತಳ್ಳುವ ಬಂಡಿಯ ಮೇಲೆ ಬಿತ್ತು. ವಿದ್ಯುತ್ ತಂತಿ ಮೇಲೆ ಮರ ಬಿದ್ದುದರಿಂದ ಸಮೀಪದ ಬಡಾವಣೆಯಲ್ಲಿ ವಿದ್ಯುಚ್ಛಕ್ತಿ ಪೂರೈಕೆಯಲ್ಲಿ ವ್ಯತ್ಯಯವಾಯಿತು.
ರಾಯಚೂರಲ್ಲಿ ಅಬ್ಬರದ ಮಳೆಗೆ ಧರೆಗುರುಳಿದ ಬೃಹತ್ ಬೇವಿನ ಮರ - Raichur Rain
ಬಿಸಿಲನಗರಿಯಲ್ಲಿ ಭಾನುವಾರ ಭಾರೀ ಮಳೆ ಸುರಿಯಿತು. ಧಾರಾಕಾರ ವರ್ಷಧಾರೆಗೆ ನಗರ ಜನಜೀವನ ಅಸ್ತವ್ಯಸ್ತಗೊಂಡಿತು.
ಮಳೆಗೆ ಬೇವಿನ ಮರ ಬಿದ್ದಿರುವುದು (ETV Bharat)
Published : May 27, 2024, 9:15 AM IST
|Updated : May 27, 2024, 10:38 AM IST
ನಗರದಲ್ಲಿ ಎರಡ್ಮೂರು ತಾಸು ಮಳೆ ಅಬ್ಬರಿಸಿತು. ಚರಂಡಿ ನೀರು ರಸ್ತೆ ಮೇಲೆ ಹರಿಯಿತು. ತಗ್ಗು ದಿಣ್ಣೆಗಳಲ್ಲಿ ರಸ್ತೆ ಮೇಲೆ ನಿಂತು ವಾಹನ ಸವಾರರು ಪರದಾಡಿದರು. ಕೆಲವು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಯಾವುದೇ ಪ್ರಾಣಾಪಾಯದ ಕುರಿತು ವರದಿಯಾಗಿಲ್ಲ.
Last Updated : May 27, 2024, 10:38 AM IST