ಕರ್ನಾಟಕ

karnataka

ETV Bharat / state

ಬೆಂಗಳೂರು: ಐಪಿಎಲ್ ಪಂದ್ಯಾವಳಿಗಳಿಗೆ "ನಮ್ಮ ಮೆಟ್ರೋ" ಸೇವಾವಧಿ ವಿಸ್ತರಣೆ - Namma metro service Extension - NAMMA METRO SERVICE EXTENSION

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಹಂತದ ಮೂರು ಪಂದ್ಯಗಳನ್ನು ನೋಡಲು ಬರುವ ಜನರ ದಟ್ಟಣೆ ತಪ್ಪಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಮ್ಮ ರೈಲು ಸೇವೆಯನ್ನು ಬಿಎಂಆರ್​ಸಿಎಲ್ ವಿಸ್ತರಿಸಿದೆ.

ನಮ್ಮ ಮೆಟ್ರೋ
ನಮ್ಮ ಮೆಟ್ರೋ

By ETV Bharat Karnataka Team

Published : Mar 22, 2024, 7:37 PM IST

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 25, 29 ಹಾಗೂ ಏಪ್ರಿಲ್ 2 ರಂದು ಐಪಿಎಲ್ 2024 ರ ಪಂದ್ಯಾವಳಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ರೈಲು ಸೇವೆಯನ್ನು ರಾತ್ರಿ 11.30 ರವರೆಗೆ ವಿಸ್ತರಣೆಯಾಗಲಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ಮೂರು ದಿನಗಳು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಗೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೇಟ್‌ಗಳು 50 ರೂ.ಗೆ ಲಭ್ಯವಿರುತ್ತದೆ. ಈ ಟಿಕೆಟ್​ಗಳು ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8 ಗಂಟೆಯಿಂದ ದಿನದ ಸೇವೆ ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಟಿಕೆಟ್​ಗಳು ಲಭ್ಯವಿರುತ್ತದೆ ಎಂದು ಹೇಳಿದೆ.

ಪಂದ್ಯಗಳು : ಮಾರ್ಚ್ 25 ರಂದು ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್​ ನಡುವೆ ಪಂದ್ಯ ನಡೆಯಲಿದೆ. ಮಾರ್ಚ್ 29 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಆರ್​ಸಿಬಿ ಎದುರಿಸಲಿದೆ. ಬಳಿಕ ಏಪ್ರಿಲ್​ 2 ರಂದು ನಡೆಯಲಿರುವ ಹೈವೊಲ್ಟೇಜ್ ಪಂದ್ಯದಲ್ಲಿ​ ಲಕ್ನೋ ಸೂಪರ್ ಜೈಂಟ್ಸ್ ಎದುರು ಆರ್​ಸಿಬಿ ಆಡಲಿದೆ. ​

ಇದಕ್ಕೂ ಮುನ್ನ ಮಾ.24 ರಂದು ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬಿಡದಿ ಹಾಫ್ ಮ್ಯಾರಥಾನ್‌ ನಡೆಯಲಿದೆ. ಓಟದ ಅನುಕೂಲಕ್ಕಾಗಿ ಮೆಟ್ರೋದ ನಾಲ್ಕು ಟರ್ಮಿನಲ್ ಹಾಗೂ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಯ ಬದಲಾಗಿ 4.30ಕ್ಕೆ ಮೆಟ್ರೋ ಸೇವೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದೆ.

ಹಾಫ್ ಮ್ಯಾರಥಾನ್‌ನಲ್ಲಿ 3 ಸಾವಿರ ಸ್ಪರ್ಧಿಗಳು ಭಾಗಿ :ಬಿಡದಿ ಇಂಡಸ್ಟ್ರಿಯಲ್ ಅಸೋಸಿಯೇಷನ್ (ಬಿಐಎ) ಫೌಂಡೇಶನ್ ಮತ್ತು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಹಯೋಗದಲ್ಲಿ ಆಯೋಜಿಸಿರುವ ಮೊದಲ ಟೊಯೊಟಾ ಗ್ರೇಟರ್ ಬೆಂಗಳೂರು ಬಿಡದಿ ಹಾಫ್ ಮ್ಯಾರಥಾನ್ 2024 ರಲ್ಲಿ ಸುಮಾರು 3000 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ :ನಮ್ಮ ಮೆಟ್ರೋ ಡೆಲ್ಟಾ ಎಲೆಕ್ಟ್ರಾನಿಕ್ಸ್ ನಡುವೆ ಒಡಂಬಡಿಕೆ: ಬೊಮ್ಮಸಂದ್ರ ಮೆಟ್ರೊ ನಿರ್ಮಾಣಕ್ಕೆ 65 ಕೋಟಿ ರೂ ಘೋಷಣೆ

ABOUT THE AUTHOR

...view details