ಶಿವಮೊಗ್ಗ:ರಾಜ್ಯದ ಪ್ರಸಿದ್ಧ ಆನೆ ಬಿಡಾರಗಳಲ್ಲಿ ಒಂದಾದ ತುಂಗಾ ತಟದ ಸಕ್ರೆಬೈಲು ಆನೆ ಬಿಡಾರದಲ್ಲಿ ಸೋಮವಾರ ವಿಶ್ವ ಆನೆಗಳ ದಿನಾಚರಣೆಯನ್ನು ಆಚರಿಸಲಾಯಿತು.
ವಿಶ್ವ ಆನೆಗಳ ದಿನಾಚರಣೆಯ ಅಂಗವಾಗಿ 2023ರ ನವೆಂಬರ್ 16 ರಂದು ಚಿಕ್ಕಮಗಳೂರು ಜಿಲ್ಲೆ ಮೂಡುಗೆರೆಯ ಆಲ್ದೂರು ಸಮೀಪ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಈ ಆನೆಯನ್ನು ಪಳಗಿಸಿ, ನಿನ್ನೆ ಕ್ಯಾಂಪ್‌ಗೆ ಕರೆ ತರಲಾಗಿದೆ. ಆನೆಗಳ ದಿನಾಚರಣೆ ದಿನವೇ ಈ ಆನೆಗೆ ಅಶ್ವಥಾಮ ಎಂದು ನಾಮಕರಣ ಮಾಡಲಾಗಿದೆ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಎಫ್ಒ ಪ್ರಸನ್ನ ಪಟಗಾರ ಅವರು ತಿಳಿಸಿದ್ದಾರೆ.