ಕರ್ನಾಟಕ

karnataka

ETV Bharat / state

'ನನ್ನ ರಾಜಕಾರಣ ಮುಗಿದಿಲ್ಲ': ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಹೆಚ್‌ಡಿಕೆ ಟಾಂಗ್ - HD KUMARASWAMY

ಚನ್ನಪಟ್ಟಣದ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದರು.

hd-kumaraswamy
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Oct 10, 2024, 10:13 PM IST

ರಾಮನಗರ:ಚನ್ನಪಟ್ಟಣ ಉಪಚುನಾವಣೆಯನ್ನು ದೇಶವೇ ಎದುರು ನೋಡುತ್ತಿದೆ. ಜೆಡಿಎಸ್ ಮುಗಿದು ಹೋಯಿತು ಎಂದವರಿಗೆ ಜನ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ. ನನ್ನ ರಾಜಕಾರಣ ಇಲ್ಲಿಗೆ ಮುಗಿದಿಲ್ಲ. ನನಗೆ ಸಿಕ್ಕ‌ ಕಡಿಮೆ ಅವಕಾಶದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಜನರಿಗೆ ಸುಳ್ಳು ಹೇಳಿಕೊಂಡು ಮೋಸ ಮಾಡುತ್ತಿರುವ ಕಾಂಗ್ರೆಸ್ ಮುಖಂಡರನ್ನು ನಂಬಬೇಡಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಕಳೆದ ನಾಲ್ಕು ತಿಂಗಳಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಬೊಗಳೆ ಭಾಷಣ ಮಾಡಿ, ಜನರಿಗೆ ಮೋಸ ಮಾಡಲು ಹೊರಟಿದ್ದಾರೆ. ಇದುವರೆಗೂ ಕ್ಷೇತ್ರದಲ್ಲಿ ಒಂದೇ ಒಂದು ಮನೆ ಕೊಟ್ಟಿಲ್ಲ. ನನ್ನ ಅವಧಿಯಲ್ಲಾದ ಯೋಜನೆಗಳನ್ನು ತಾವೇ ಮಾಡಿದ್ದೆಂದು ಹೇಳಿ ಬ್ಯಾನರ್ ಹಾಕಿಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಕಳೆದ ಆರು ವರ್ಷ ಕ್ಷೇತ್ರದ ಶಾಸಕನಾಗಿದ್ದಾಗ ಒಂದೂವರೆ ಸಾವಿರ ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಅದು ಜನರ ಮನಸ್ಸಿನಲ್ಲಿದೆ ಎಂದರು.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭಾಷಣ (ETV Bharat)

ಪಂಚ ಗ್ಯಾರಂಟಿ ಯೋಜನೆಗಳು ಬರುವ ಜಿ.ಪಂ.ಚುನಾವಣೆವರೆಗೆ ಮಾತ್ರ ಇರುತ್ತವೆ. ಈಗಾಗಲೇ ಈ ಯೋಜನೆಗಳಿಂದ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ. ಬರುವ ಜಿ.ಪಂ.ಹಾಗೂ ತಾ.ಪಂ.ಚುನಾವಣೆಯವರೆಗೆ ಮಾತ್ರ ಈ ಯೋಜನೆಯನ್ನು ಜನರಿಗೆ ಕೊಡುತ್ತಾರೆ ಅಷ್ಟೆೇ ಎಂದು ಇದೇ ವೇಳೆ ಹೆಚ್​ಡಿಕೆ ತಿಳಿಸಿದರು.

ಇದನ್ನೂ ಓದಿ:ಒಂದು ದಿನವಾದರೂ ನನ್ನನ್ನು ಜೈಲಿಗೆ ಕಳಿಸಲು ಸಿದ್ದರಾಮಯ್ಯ ಪಟಾಲಂ ಸಂಚು: ಹೆಚ್​ಡಿಕೆ - H D Kumaraswamy

ABOUT THE AUTHOR

...view details