ಕರ್ನಾಟಕ

karnataka

ETV Bharat / state

ಮುಡಾ ಪ್ರಕರಣ: ತನಿಖೆಗೆ ಹಾಜರಾಗುವಂತೆ ಇಬ್ಬರಿಗೆ ಮೈಸೂರು ಲೋಕಾಯುಕ್ತದಿಂದ ನೋಟಿಸ್ - MUDA CASE

ಮುಡಾದ 14 ಬದಲಿ ನಿವೇಶನಗಳ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗುವಂತೆ ಇಬ್ಬರಿಗೆ ಮೈಸೂರು ಲೋಕಾಯುಕ್ತದಿಂದ ನೋಟಿಸ್ ನೀಡಲಾಗಿದೆ.

MUDA CASE
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ETV Bharat)

By ETV Bharat Karnataka Team

Published : Oct 9, 2024, 4:25 PM IST

ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಳೆ ತನಿಖೆಗೆ ಹಾಜರಾಗುವಂತೆ ಎಫ್​ಐಆರ್​ನಲ್ಲಿ ದಾಖಲಾಗಿರುವ 3ನೇ ಹಾಗೂ 4ನೇ ಆರೋಪಿಗಳಿಗೆ ಮೈಸೂರು ಲೋಕಾಯುಕ್ತರು ಇಂದು ನೋಟಿಸ್‌ ಜಾರಿ ಮಾಡಿದ್ದಾರೆ.

A3 ಆರೋಪಿಯಾಗಿರುವ ಮಲ್ಲಿಕಾರ್ಜುನ್‌ ಸ್ವಾಮಿ ಹಾಗೂ A4 ದೇವರಾಜು ಎಂಬವರು ವಿಚಾರಣೆಗೆ ಬರುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮಾಹಿತಿ ಪಡೆಯಲು 'ಈಟಿವಿ ಭಾರತ' ಪ್ರತಿನಿಧಿ ಲೋಕಾಯುಕ್ತ ಎಸ್ಪಿ ಉದೇಶ್‌ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಮುಡಾಗೆ ಇಡಿ ನೋಟಿಸ್‌: ಕಳೆದ 9 ವರ್ಷಗಳಲ್ಲಿ ಮುಡಾದಲ್ಲಿ 50:50 ಬದಲಿ ನಿವೇಶನ ಹಾಗೂ ಇತರ ಅಕ್ರಮಗಳ ಕುರಿತು ದೂರುದಾರ ಸ್ನೇಹಮಯಿ ಕೃಷ್ಣ 500 ಪುಟದ ದಾಖಲೆಗಳನ್ನು ಇಡಿಗೆ ತಲುಪಿಸಿದ್ದು, ದೂರು ಸಹ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇಡಿ ತನಿಖೆಗೂ ಹಾಜರಾಗಿದ್ದರು. ಇದರ ನಡುವೆ ಇಡಿ ಅಧಿಕಾರಿಗಳು ಮೂರು ದಿನಗಳಲ್ಲಿ ಅಗತ್ಯ ಹಣಕಾಸು ವಹಿವಾಟು ನಡೆದಿರುವ ಮಾಹಿತಿ ನೀಡುವಂತೆ ಮುಡಾಗೆ ಮಂಗಳವಾರ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಮುಡಾಗೆ ದಾಖಲೆ ಒದಗಿಸುವ ಸವಾಲು: ಒಂದೆಡೆ ಲೋಕಾಯುಕ್ತ, ಮತ್ತೊಂದೆಡೆ ಇಡಿ ತನಿಖೆ ನಡೆಸುತ್ತಿದ್ದು, ಈ ತನಿಖೆಗೆ ದಾಖಲಾತಿಗಳನ್ನು ಕೊಡುವುದೇ ಮುಡಾ ನೌಕರರಿಗೆ ದೊಡ್ಡ ಸವಾಲಾಗಿದೆ. ತನಿಖೆಗೆ ದಾಖಲಾತಿಗಳನ್ನು ನೀಡಲು ಹೊಸ ಜೆರಾಕ್ಸ್‌ ಯಂತ್ರಗಳನ್ನು ಖರೀದಿಸಿದ್ದು, ಹಗಲು ರಾತ್ರಿ ಎನ್ನದೆ ದಾಖಲಾತಿಗಳನ್ನು ಜೆರಾಕ್ಸ್‌ ಮಾಡಿಸಲಾಗುತ್ತಿದೆ.

ಇದನ್ನೂ ಓದಿ:ಕುಮಾರಸ್ವಾಮಿಯವರ ಯಾವುದೇ ಹೇಳಿಕೆಗಳು ನ್ಯಾಯಯುತವಾಗಿರಲ್ಲ: ಡಿ.ಕೆ.ಸುರೇಶ್

ABOUT THE AUTHOR

...view details