ಬಾಗಲಕೋಟೆ: ಸಿಎಂ ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತಾವು ಪ್ರಾಮಾಣಿಕ ರಾಜಕಾರಣಿ, ಸಮಾಜವಾದಿ, ನನ್ನ ಮೇಲೆ ಯಾವುದೇ ಭ್ರಷ್ಟಾಚಾರದಂತಹ ಕಪ್ಪು ಚುಕ್ಕೆ ಇಲ್ಲ ಅಂತ ಹೇಳಿಕೊಂಡು ಬಂದಿದ್ದರು. ಇದೀಗ ಅವರ ಬಣ್ಣ ಬಯಲಾಗಿದೆ. ಮುಖವಾಡ ಕಳಚಿದೆ ಎಂದು ಟೀಕಿಸಿದರು.
ವಾಲ್ಮೀಕಿ ಹಗರಣದ ವಿಚಾರದಲ್ಲಿ ಏಕೆ ಸುಮ್ನೆ ಕೂತ್ರಿ? ಯಾವುದೋ ಒಂದು ಡಿಪಾರ್ಟ್ಮೆಂಟ್ನಲ್ಲಿ ವಿತ್ ಡ್ರಾ ಆಗುತ್ತೆ ಅಂದ್ರೆ ಹೇಗೆ? ಬೇರೆ ಖಾತೆಗೆ ಜಮಾ ಆಗುತ್ತೆ ಅಂದರೆ, ಅದೆಲ್ಲ ಫೈನಾನ್ಸ್ ಇಲಾಖೆಗೆ ಬಂದೇ ಬರುತ್ತೆ. ಏಕೆ ಇದನ್ನು ಪ್ರಶ್ನೆ ಮಾಡಲಿಲ್ಲ? ನಿಮ್ಮ ಇನ್ವಾಲ್ವ್ ಮತ್ತು ನಿಮ್ಮ ಗಮನಕ್ಕೆ ಬರದೇ ಇದೆಲ್ಲ ನಡಿಲಿಕ್ಕೆ ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಆಗ ಎಲೆಕ್ಷನ್ ಬಂದಿತ್ತು. ಹಾಗಾಗಿ ಹಣ ಬೇಕಾಗಿತ್ತು. ಯಾರೋ ಮಂತ್ರಿಗಳು ಇಲ್ಲಿಂದ ಹಣ ಬರುತ್ತದೆ ಅಂತ ಹೇಳಿದರು, ತಕ್ಷಣ ಯಸ್ ನೀವು ಅಂತ ಒಪ್ಪಿಗೆ ಕೊಟ್ಟಿದ್ದೀರಿ. ಆಗ ಸುಮ್ಮನಿದ್ರಿ. ಮುಖ್ಯಮಂತ್ರಿ ಗಮನಕ್ಕೆ ಬರದೇ ಇದು ಆಗಲಿಕ್ಕೆ ಸಾಧ್ಯನೇ ಇಲ್ಲ. ಯಾವುದಾದರೊಂದು ಪ್ರಾಜೆಕ್ಟ್ಗೆ 10 ಕೋಟಿ ಬಿಡುಗಡೆ ಮಾಡಬೇಕು ಅಂದರೆ, ಹಣಕಾಸು ಇಲಾಖೆಗೆ 10 ಸಲ ನಾನೇ ತಿರುಗಿದ್ದೇನೆ. ಅಲ್ಲಿ ಒಪ್ಪಿಗೆ ಇಲ್ಲದೆ ಯಾವ 10 ಕೋಟಿ ಹಣವೂ ಬಿಡುಗಡೆ ಆಗಲ್ಲ. ಅಂತಹದನ್ನು ನೂರಾರು ಕೋಟಿ ಹಣ ಬಿಡುಗಡೆ ಆಗುತ್ತೆ, ಹಣಕಾಸು ಇಲಾಖೆ ಕೈಕಟ್ಟಿ ಕೂಡುತ್ತೆ ಅಂದ್ರೆ, ಇದರಲ್ಲಿ ಅವರದ್ದು ಇನ್ವಾಲ್ವ್ಮೆಂಟ್ ಇದೆ ಎಂದು ಆರೋಪಿಸಿದರು.