ರಾಮನಗರ :ಬೆಂಗಳೂರಿನಿಂದ ರಾಮನಗರಕ್ಕೆ ಹೋಗುತ್ತಿದ್ದ ಸ್ಕಾರ್ಪಿಯೋ ಕಾರೊಂದು ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಘಟನೆ ಬಿಡದಿ ಸಂಮೀಪ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇಂದು ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಮಕ್ಕಳು ಸೇರಿದಂತೆ 10 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಮನಗರದ ನಿವಾಸಿಗಳಾದ ಮುಸ್ಲಿಂ ಕುಟುಂಬದ ಮೂವರು ಮಕ್ಕಳು ಸೇರಿ 10 ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಕಾರು ನಿಲ್ಲಿಸಿ ಲಗೇಜ್ ಬ್ಯಾಗ್ ಸಹಿತ ಎಲ್ಲರೂ ಕೆಳಗಿಳಿದಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಇನ್ನು ಘಟನೆಯಲ್ಲಿ ಸುಟ್ಟುಹೋದ ಸ್ಕಾರ್ಪಿಯೋ ಕಾರು ಹಳೆಯದಾಗಿದ್ದು, ಅದು ರಾಮನಗರ ಮೂಲದ ಕುಟುಂಬವೊಂದಕ್ಕೆ ಸೇರಿದೆ ಎಂದು ವರದಿಯಾಗಿದೆ.