ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ: ಹೆಚ್. ವಿಶ್ವನಾಥ್‌ - H Vishwanath

ಸಿದ್ದರಾಮಯ್ಯನವರು ಮುಡಾ ವಿಚಾರದಲ್ಲಿ ರಂಪ ಮಾಡಿಕೊಳ್ಳುವುದು ಬೇಡ. ಜನ ಅಧಿಕಾರ ಕೊಟ್ಟಿದ್ದಾರೆ, ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಈಗ ರಾಜೀನಾಮೆ ನೀಡುವುದು ಉತ್ತಮ ಎಂದು ಎಂಎಲ್​ಸಿ ಹೆಚ್​ ವಿಶ್ವನಾಥ್​​ ಹೇಳಿದರು.

ಹೆಚ್. ವಿಶ್ವನಾಥ್‌
ಹೆಚ್. ವಿಶ್ವನಾಥ್‌ (ETV Bharat)

By ETV Bharat Karnataka Team

Published : Aug 17, 2024, 8:19 PM IST

Updated : Aug 17, 2024, 10:48 PM IST

ಹೆಚ್. ವಿಶ್ವನಾಥ್‌ (ETV Bharat)

ಮೈಸೂರು: ಸಿಎಂ ಸಿದ್ದರಾಮಯ್ಯ ಯಾರಿಗೂ ಬಗ್ಗುವುದು, ಜಗ್ಗುವುದು ಬೇಡ. ಮೊದಲು ಕಾನೂನಿಗೆ ತಲೆಬಾಗಬೇಕು. ಸಿದ್ದರಾಮಯ್ಯನವರು ಮುಡಾ ವಿಚಾರದಲ್ಲಿ ರಂಪ ಮಾಡಿಕೊಳ್ಳುವುದು ಬೇಡ. ಜನ ಅಧಿಕಾರ ಕೊಟ್ಟಿದ್ದಾರೆ, ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಈಗ ರಾಜೀನಾಮೆ ನೀಡಿವುದು ಉತ್ತಮ( it is better to resign and get out) ಎಂದು ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್​​ ಹೇಳಿದರು.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳು ಯಾವಾಗಲು ಹೇಳುತ್ತಾರೆ. ಕಾನೂನು ತನ್ನ ಪಾಡಿಗೆ ಕೆಲಸ ಮಾಡುತ್ತದೆ ಎಂದು. ಅದೇ ರೀತಿ ಈಗ ಕೆಲಸ ಮಾಡಿದೆ. ಮೊದಲೇ ನಾನು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದೆ. ದಯವಿಟ್ಟು ಸೈಟ್‌ ವಾಪಸ್‌ ಕೊಡಿ. 14 ಸೈಟ್‌ ತೆಗೆದುಕೊಂಡು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.

ರಾಜ್ಯಪಾಲರು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂಬ ಹೇಳಿಕೆ ಮಾಮೂಲಿ. ಎಲ್ಲಾ ಪಕ್ಷದವರು ಇದನ್ನೇ ಹೇಳುತ್ತಾರೆ. ಆದರೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಯಾವಾಗಲೂ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಗೌರವ ಉಳಿಯುತ್ತದೆ. ಅದನ್ನು ಬಿಟ್ಟು ಹಠ ಮಾಡಬಾರದು. ಇಲ್ಲಿಯ ಕಾನೂನು ಹಾಗೂ ಜನರಿಗೆ ತಲೆಬಾಗಿ ತನಿಖೆ ಎದುರಿಸಬೇಕು ಎಂದು ಹೆಚ್​ ವಿಶ್ವನಾಥ್ ಒತ್ತಾಯಿಸಿದರು.

ಇದನ್ನೂ ಓದಿ:ಸಿಎಂ ಪ್ರಾಸಿಕ್ಯೂಷನ್ ಅನುಮತಿ; 'ಇದು ಜಯವಲ್ಲ, ಒಂದೇ ಹೆಜ್ಜೆ ಮುಂದಕ್ಕೆ ಹೋಗಿದ್ದೇನೆ': ದೂರುದಾರ ಟಿ.ಜೆ.ಅಬ್ರಹಾಂ - PROSECUTION AGAINST CM

Last Updated : Aug 17, 2024, 10:48 PM IST

ABOUT THE AUTHOR

...view details