ಕರ್ನಾಟಕ

karnataka

ETV Bharat / state

ಸುಪ್ರೀಂ ಕೋರ್ಟ್​ನಲ್ಲೂ ನಿಮ್ಮ ಪರ ತೀರ್ಪು ಬರುವುದಿಲ್ಲ: ಎಚ್​. ವಿಶ್ವನಾಥ್​​ - MLC H Vishwanath

ಮುಡಾ ಪ್ರಕರಣ ಹೊರಬರುತ್ತಿದ್ದಂತೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಹೇಳಿದ್ದೆ. ಇನ್ನು ನೀವು ಸುಪ್ರೀಂ ಕೋರ್ಟ್‍ಗೆ ಹೋದರೂ ನಿಮ್ಮ ಪರ ತೀರ್ಪು ಬರುವುದಿಲ್ಲ ಎಂದು ಎಚ್.ವಿಶ್ವನಾಥ್ ಹೇಳಿದರು.​

ವಿಧಾನ ಪರಿಷತ್ ಸದಸ್ಯ ಎಚ್​. ವಿಶ್ವನಾಥ್​
ವಿಧಾನ ಪರಿಷತ್ ಸದಸ್ಯ ಎಚ್​.ವಿಶ್ವನಾಥ್​ (ETV Bharat)

By ETV Bharat Karnataka Team

Published : Sep 25, 2024, 2:14 PM IST

ಮೈಸೂರು:"ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಸುಪ್ರಿಂ ಕೋರ್ಟ್‍ಗೆ ಹೋದರೂ ನಿಮ್ಮ ಪರವಾಗಿ ತೀರ್ಪು ಬರುವುದಿಲ್ಲ. ಹಾಗಾಗಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ" ಎಂದು ವಿಧಾನ ಪರಿಷತ್ ಸದಸ್ಯ ಎಚ್​.ವಿಶ್ವನಾಥ್​ ಒತ್ತಾಯಿಸಿದ್ದಾರೆ.

ಸಿಎಂ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್​ ನಿರ್ಧಾರವನ್ನು ವಿಶ್ವನಾಥ್ ಸ್ವಾಗತಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಎಚ್​.ವಿಶ್ವನಾಥ್ (ETV Bharat)

"ಪ್ರಕರಣ ಹೊರಬರುತ್ತಿದ್ದಂತೆ ನಾನು 14 ನಿವೇಶನಗಳನ್ನು ವಾಪಸ್ ಕೊಟ್ಟು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಈ ಹಿಂದೆಯೇ ಹೇಳಿದ್ದೆ. ಮುಡಾದೆದುರು ಸುದ್ದಿಗೋಷ್ಠಿ ನಡೆಸಿ, ಯಾರೋ ನಿಮ್ಮ ಕೈ ಕೆಳಗೆ ಸಹಿ ಹಾಕಿಸಿ ಮೋಸ ಮಾಡಿದ್ದಾರೆ. ಎಲ್ಲ ಸೈಟುಗಳನ್ನು ವಾಪಸ್ ಕೊಟ್ಟು ತನಿಖೆ ಮಾಡಿಸಿ ಎಂದು ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದೆ. ಅಂದು ನಾನು ಹೇಳಿದಂತೆ ತನಿಖೆ ಮಾಡಿದ್ದರೆ ಎಲ್ಲ ಸತ್ಯ ಹೊರಬರುತ್ತಿತ್ತು. ಎಲ್ಲ ಪಕ್ಷಗಳ ಕಳ್ಳರು ಸಿಕ್ಕಿಹಾಕಿಕೊಳ್ಳುತ್ತಿದ್ದರು. ನನ್ನ ಮಾತು ಧಿಕ್ಕರಿಸಿದ ನೀವು, ನಿಮ್ಮ ಸುತ್ತಮುತ್ತ ಇರುವವರ ಮಾತು ಕೇಳಿದಿರಿ. ಈಗ ಹೈಕೋರ್ಟ್ ಆದೇಶ ನಿಮ್ಮ ವಿರುದ್ಧವಾಗಿ ಬಂದಿದೆ. ರಾಜ್ಯಪಾಲರ ನಡೆ ಮತ್ತು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನೀವು ಸುಪ್ರೀಂ ಕೋರ್ಟ್‍ಗೆ ಹೋದರೂ ನಿಮ್ಮ ಪರ ತೀರ್ಪು ಬರುವುದಿಲ್ಲ" ಎಂದು ವಿಶ್ವನಾಥ್ ಹೇಳಿದರು.

ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ತನಿಖೆ ಕೋರಿ ಅರ್ಜಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ - MUDA Scam

ABOUT THE AUTHOR

...view details