ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ನವರಾತ್ರಿ ದಾಂಡಿಯಾ ರಾಸ್‌: ಕೋಲಾಟ ಆಡಿದ ಶಾಮನೂರು - Navaratri Dandiya - NAVARATRI DANDIYA

ನವರಾತ್ರಿ ಪ್ರಯುಕ್ತ ಆಯೋಜಿಸಲಾಗಿದ್ದ ದಾಂಡಿಯಾದಲ್ಲಿ ಹಿರಿಯ ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಕೋಲಾಟ ಆಡಿ ಸಂತಸಪಟ್ಟರು.

ಕೋಲಾಟ ಆಡಿದ ಶಾಸಕ ಶಾಮನೂರು
ಕೋಲಾಟ ಆಡಿದ ಶಾಸಕ ಶಾಮನೂರು (ETV Bharat)

By ETV Bharat Karnataka Team

Published : Oct 4, 2024, 8:26 PM IST

ದಾವಣಗೆರೆ:ನವರಾತ್ರಿ ಪ್ರಯುಕ್ತ ನಗರದ ರಾಮ್ ಆ್ಯಂಡ್ ಕೋ ವೃತ್ತದ ಬಳಿಯ ಸ್ವೆಟ್‌ ಪಾರ್ಕ್‌ ಸಂಸ್ಥೆ ಆಯೋಜಿಸಿದ್ದ ದಾಂಡಿಯಾ ರಾಸ್​ ಅನ್ನು ಇಂದು ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ನಂತರ ಅವರೂ ಕೋಲಾಟ ಆಡಿ ಸಂಭ್ರಮಿಸಿದರು.

ನವರಾತ್ರಿ ಎರಡನೇ ದಿನವಾದ ಇಂದು ದಾವಣಗೆರೆಯ ಬಹುತೇಕ ಕಡೆ ದಾಂಡಿಯಾ ನೃತ್ಯ ಮಾಡಲಾಗುತ್ತಿದೆ. ದಾಂಡಿಯಾ ರಾಸ್​ನಲ್ಲಿ ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು. ನೃತ್ಯದಲ್ಲಿ ಪಾಲ್ಗೊಳ್ಳಲು ನೆರೆಹೊರೆ ಜಿಲ್ಲೆಗಳಿಂದಲೂ ಮಹಿಳೆಯರು ಇಲ್ಲಿಗೆ ಆಗಮಿಸುವುದು ವಿಶೇಷವಾಗಿದೆ.

ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ (ETV Bharat)

ಗುಜರಾತ್‍ನ ಸಾಂಪ್ರದಾಯಿಕ ಜಾನಪದ ನೃತ್ಯರೂಪ ದಾಂಡಿಯಾ ರಾಸ್ ದಾವಣಗೆರೆಯಲ್ಲಿ ಖ್ಯಾತಿ ಪಡೆದಿದೆ. ಈ ನೃತ್ಯವನ್ನು ದಸರಾ ಹಬ್ಬದ ವೇಳೆ ಆಯೋಜಿಸಲಾಗುತ್ತದೆ. ಇದು ಪಶ್ಚಿಮ ಭಾರತದಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ವೈಶಿಷ್ಟ್ಯಪೂರ್ಣ ನೃತ್ಯ ಪ್ರಕಾರ.

ಇದನ್ನೂ ಓದಿ:ದಾವಣಗೆರೆ: ನಾಳೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ, ಬಿಗಿ ಭದ್ರತೆ - Hindu Maha Ganapati Procession

ABOUT THE AUTHOR

...view details