ಕರ್ನಾಟಕ

karnataka

ETV Bharat / state

ಮನೆ ಬಿಟ್ಟು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆ: ಮತ್ತೆ ಕುಟುಂಬಸ್ಥರ ಬಳಿಗೆ ಸೇರ್ಪಡೆ - woman missing case

ಮನೆಯಿಂದ ತಪ್ಪಿಸಿಕೊಂಡು ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯನ್ನು ಮತ್ತೆ ಕುಟುಂಬಸ್ಥರ ಬಳಿಗೆ ಸೇರಿಸಲು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು ವಿಮಾನ ನಿಲ್ದಾಣ (File Photo ETV Bharat)

By ETV Bharat Karnataka Team

Published : May 16, 2024, 8:01 PM IST

Updated : May 16, 2024, 8:36 PM IST

ಮಂಗಳೂರು:ಯಾವುದೋ ಕಾರಣಕ್ಕಾಗಿ ಮನೆ ಬಿಟ್ಟು ಬಂದಿದ್ದ ಮಹಿಳೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದಾಳೆ. ನಿಲ್ದಾಣದ ಅಧಿಕಾರಿಗಳ ನೆರವಿನಿಂದ ಮಹಿಳೆ ಮತ್ತೆ ಕುಟುಂಬಸ್ಥರನ್ನು ಸೇರಿದ್ದಾಳೆ.

ಎರಡು ದಿನಗಳ ಹಿಂದೆ (ಮೇ 14 ರಂದು) ಈ ಘಟನೆ ನಡೆದಿದೆ. ಮಹಿಳೆ ಮನೆಯಿಂದ ಒಂಟಿಯಾಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾಳೆ. ಈ ವೇಳೆ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಸೂಕ್ತ ಮಾಹಿತಿ ನೀಡಿಲ್ಲ. ಅನುಮಾನ ಬಂದ ಅಧಿಕಾರಿಗಳು ಆಕೆಯನ್ನು ಮಹಿಳಾ ಅಧಿಕಾರಿಗಳು ಬಳಿ ಕರೆದೊಯ್ದು ಮಾಹಿತಿ ಕಲೆ ಹಾಕಿದ್ದಾರೆ. ಇತ್ತ ಕುಟುಂಬಸ್ಥರು ಮಹಿಳೆ ಮನೆಯಲ್ಲಿ ಇಲ್ಲದ್ದನ್ನು ಕಂಡು ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಘಟನೆಯ ವಿವರ:ನಗರದ ಕದ್ರಿ ಪ್ರದೇಶದಿಂದ ಆಟೋರಿಕ್ಷಾದಲ್ಲಿ ಮಹಿಳೆ ತಾನಾಗಿಯೇ ವಿಮಾನ ನಿಲ್ದಾಣ ತಲುಪಿದ್ದಾಳೆ. ಈ ಮಧ್ಯೆ ಯುವತಿ ಕಾಣೆಯಾಗಿರುವುದನ್ನು ಮನಗಂಡ ಕುಟುಂಬಸ್ಥರು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ವಿಮಾನ‌ ನಿಲ್ದಾಣಕ್ಕೆ ಮಹಿಳೆ ಬಂದ ಕಾರಣಗಳನ್ನು ಭದ್ರತಾ ಸಿಬ್ಬಂದಿಗೆ ವಿವರಿಸಲು ಸಾಧ್ಯವಾಗದಿದ್ದಾಗ ಮತ್ತು ಜನರು ಅವಳನ್ನು ಸ್ವಾಗತಿಸಲು ಬರುತ್ತಾರೆ ಎಂದು ಒತ್ತಾಯಿಸುತ್ತಿದ್ದಾಗ, ಇದರಿಂದ ಏನೋ ತಪ್ಪಾಗಿದೆ ಎಂದು ಗ್ರಹಿಸಿದ ಅಧಿಕಾರಿಗಳು ಆಕೆಯನ್ನು ಮೇಲ್ವಿಚಾರಣೆ ಮಾಡಿದ್ದಾರೆ.

ಡ್ಯೂಟಿ ಟರ್ಮಿನಲ್ ಮ್ಯಾನೇಜರ್ ಮಹಿಳೆಯ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಕರ್ತವ್ಯದಲ್ಲಿದ್ದ ಸಿಐಎಸ್ಎಫ್ ಮಹಿಳಾ ಅಧಿಕಾರಿಯೊಂದಿಗೆ ಗ್ರಾಹಕ ಸೇವೆ ಮತ್ತು ಅತಿಥಿ ಸಂಬಂಧಗಳ ಕಾರ್ಯನಿರ್ವಾಹಕರು ಸಮಸ್ಯೆ ಬಗೆಹರಿಯುವವರೆಗೂ ಮಹಿಳೆಯ ಜೊತೆಗಿದ್ದರು. ಡ್ಯೂಟಿ ಟರ್ಮಿನಲ್ ಮ್ಯಾನೇಜರ್ ಅವರ ಕೋರಿಕೆ ಮೇರೆಗೆ ಪೊಲೀಸರಿಗೆ ವಿಮಾನ ನಿಲ್ದಾಣದಲ್ಲಿ ಕಾಣೆಯಾದ ಮಹಿಳೆ ಇರುವ ಬಗ್ಗೆ ಮಾಹಿತಿ ನೀಡಿದರು.

ಸ್ವಲ್ಪ ಸಮಯದ ನಂತರ, ಮಹಿಳೆಯ ಸಂಬಂಧಿಕರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಎರಡೂ ಪೊಲೀಸ್ ಠಾಣೆಗಳ ಅಧಿಕಾರಿಗಳಿಂದ ಸೂಕ್ತ ಅನುಮತಿ ಪಡೆದ ನಂತರ, ಅವರು ಆಕೆಯನ್ನು ಮನೆಗೆ ಕರೆದೊಯ್ದಿದ್ದಾರೆ.

ಭದ್ರತಾ ಮೇಲ್ವಿಚಾರಕರು ಮತ್ತು ಸಿಬ್ಬಂದಿ, ಗ್ರಾಹಕ ಸೇವೆ ಮತ್ತು ಅತಿಥಿ ಸಂಬಂಧಗಳ ಕಾರ್ಯನಿರ್ವಾಹಕರು, ಸಿಐಎಸ್ಎಫ್​ನ ವಿಮಾನ ನಿಲ್ದಾಣ ಭದ್ರತಾ ಗುಂಪಿನ ಸಿಬ್ಬಂದಿ, ಕರ್ತವ್ಯ ಟರ್ಮಿನಲ್ ಮ್ಯಾನೇಜರ್ ಮತ್ತು ಭದ್ರತಾ ವಿಭಾಗದ ಕಾರ್ಯನಿರ್ವಾಹಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ವಿಮಾನ ನಿಲ್ದಾಣದ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:300ಕ್ಕೂ ಹೆಚ್ಚು ಸ್ಥಾನ ಗೆದ್ದು 'ಇಂಡಿಯಾ' ಮೈತ್ರಿಕೂಟ ಸರ್ಕಾರ ರಚಿಸಲಿದೆ: ಉತ್ತರ ಪ್ರದೇಶದಲ್ಲಿ ಡಿಕೆಶಿ ಹೇಳಿಕೆ - DK Shivakumar in Lucknow

Last Updated : May 16, 2024, 8:36 PM IST

ABOUT THE AUTHOR

...view details