ಮಂಗಳೂರು: ನಗರದ ಮೆಡಿಕಲ್ ಕಾಲೇಜೊಂದರ ಮಹಿಳಾ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಿರುವ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅಪ್ರಾಪ್ತನೋರ್ವನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಕಾಲೇಜಿನ ಸೆಕ್ಯುರಿಟಿ ಫೀಲ್ಡ್ ಮ್ಯಾನೇಜರ್ ರಾಜು ಎಂಬವರಿಗೆ ಮೇ 06ರ ಸಂಜೆ 3:30ರ ಸುಮಾರಿಗೆ 1ನೇ ಮಹಡಿಯ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ರಿಂಗಣಿಸಿದ್ದು ಕೇಳಿಸಿದೆ. ತಕ್ಷಣ ಹೋಗಿ ನೋಡಿದಾಗ ಶೌಚಾಲಯದ ಒಳಗೆ ಮೇಲ್ಭಾಗದ ಕ್ಯಾಸ್ಟ್ ಪ್ಯಾನ್ ಬಳಿ ಮೊಬೈಲ್ ಫೋನ್ ಇಟ್ಟಿರುವುದು ಪತ್ತೆಯಾಗಿದೆ. ಯಾರೋ ಮೊಬೈಲ್ ಫೋನ್ ಇಟ್ಟು ಮಹಿಳೆಯರು ಶೌಚ ಮಾಡುವ ದೃಶ್ಯ ಸೆರೆಹಿಡಿಯಲು ಇರಿಸಿದಂತೆ ಕಂಡುಬರುತ್ತಿತ್ತು. ಅನುಮಾನ ಬಂದು ಅವರು ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.