ಬೆಂಗಳೂರು: ''ಈ ಬಾರಿ ನಾನು ಕೊಟ್ಟ ಹೇಳಿಕೆ ಮಾಧ್ಯಮದಲ್ಲಿ ಹೆಚ್ಚು ಸುದ್ದಿ ಆಯ್ತು. ನಾನು ಪಬ್ಲಿಕ್ ಪ್ಲೇಸ್ ನಲ್ಲಿ ಹೇಳಿಕೆ ಕೊಡಬಾರದು ಅಂತ ನನಗೂ ಅನ್ನಿಸಿತ್ತು'' ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ''ಮೊದಲೇ ನಾನು ಹೇಳಿದ್ದೆ ಮೂರು ಗೆಲ್ಲುತ್ತಿವೆ. ನಾನು ಚನ್ನಪಟ್ಟಣದಲ್ಲಿ ಕೊಟ್ಟ ಹೇಳಿಕೆ ಇದೇ ಮೊದಲಲ್ಲ. ಈ ಹಿಂದೆ ಕೂಡ ಹೇಳಿಕೆ ಕೊಟ್ಟಿದ್ದೆ. ಈ ಬಾರಿ ನಾನು ಕೊಟ್ಟ ಹೇಳಿಕೆ ಮಾಧ್ಯಮದಲ್ಲಿ ಹೆಚ್ಚು ಸುದ್ದಿ ಆಯ್ತು. ಚನ್ನಪಟ್ಟಣ ಪಲಿತಾಂಶ ನೋಡಿದರೆ, ಅದು ಯಾವುದೂ ವರ್ಕೌಟ್ ಆಗಿಲ್ಲ ಅನ್ನಿಸುತ್ತೆ. ಹಲವು ಬಾರಿ ಕುಮಾರಸ್ವಾಮಿ ನನಗೆ ಕುಳ್ಳ ಅಂತ ಕರೆದಿರೋದಿದೆ. ನಾನು ಅವರನ್ನು ಕರಿಯ ಅಂತ ಹೇಳಿದ್ದೇನೆ. ಆದರೆ ಈ ಬಾರಿ ಹೆಚ್ಚು ಪ್ರಚಾರ ಪಡೆದುಕೊಳ್ತು ಎಂದು ಸಮರ್ಥನೆ'' ನೀಡಿದರು.
''ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ರಾಜ್ಯದ ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವ, ಐದು ಗ್ಯಾರಂಟಿ ಅನುಷ್ಠಾನದ ಮೂಲಕ ನುಡಿದಂತೆ ನಡೆದ ಸರ್ಕಾರಕ್ಕೆ ಜನರು ನೀಡಿದ ಆಶೀರ್ವಾದ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿರಂತರ ಅಪಪ್ರಚಾರ ಮಾಡಿ ಸರ್ಕಾರದ ಅಭಿವೃದ್ಧಿ ಕೆಲಸ ಮರೆಮಾಚಿ ಜನರ ದಿಕ್ಕು ತಪ್ಪಿಸಲು ಮುಂದಾದ ಬಿಜೆಪಿ - ಜೆಡಿಎಸ್ ಕುತಂತ್ರಕ್ಕೆ ಮತದಾರ ಸೂಕ್ತ ಉತ್ತರ ನೀಡಿದ್ದಾರೆ'' ಎಂದು ಹೇಳಿದರು.
ಇದನ್ನೂ ಓದಿ:''ಆ ಒಂದು ಸಮುದಾಯ ನಮ್ಮ ಕೈ ಹಿಡಿಯಲಿಲ್ಲ'': ದೇವೇಗೌಡರನ್ನ ಭೇಟಿಯಾದ ನಿಖಿಲ್ ಕುಮಾರಸ್ವಾಮಿ